ಬೆಂಗಳೂರು : ಲಿಂಗಾಯತ ಪಂಚಮಸಾಲಿಗೆ 2C, 2D ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ಹೈಕೋರ್ಟ್ ಮುಖ್ಯ ನ್ಯಾಯಪೀಠ ನೀಡಿದ್ದ ಯಥಾಸ್ಥಿತಿ ಆದೇಶವನ್ನು ತೆರವುಗೊಳಿಸಿದೆ.
ಪಂಚಮಸಾಲಿಗೆ 2A ಮೀಸಲಾತಿ ನೀಡದಂತೆ ಡಿ.ಜಿ ರಾಘವೇಂದ್ರ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು.
ಈ ಸಂಬಂಧ ಗುರುವಾರ ಮತ್ತೆ ವಿಚಾರಣೆ ನಡೆಸಿದಾಗ, 2ಎ ಮೀಸಲಾತಿಯಲ್ಲಿ ಪರಿವರ್ತನೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಭರವಸೆ ನೀಡಿದರು. ಕೇಂದ್ರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ತೆರವು ಮಾಡಿದೆ. ಈ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದ ಆದೇಶ ತೆರವು ಮಾಡಿದೆ. ಇದರಿಂದಾಗಿ ಪಂಚಮಸಾಲಿಗೆ 2C, 2D ಮೀಸಲಾತಿ ಕಲ್ಪಿಸಲು ಯಾವುದೇ ಅಡ್ಡಿ ಇಲ್ಲದಂತೆ ಆಗಿದೆ.
ಕೇಂದ್ರ ಸರ್ಕಾರ ನೀಡಿದ ಭರವಸೆಯಿಂದಾಗಿ ಮಧ್ಯಂತರ ಆದೇಶ ತೆರವು ಮಾಡಿದೆ. ಇದರೊಂದಿಗೆ ಯಾವುದೇ ಕ್ರಮ ಹೈಕೋರ್ಟ್ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕು ಎಂದು ಸೂಚಿಸಿದೆ.