ಕೆಪಿಸಿಸಿ ಗೆ ಶೀಘ್ರದಲ್ಲಿಯೇ ನೂತನ ಅಧ್ಯಕ್ಷರನ್ನು ನೇಮಕ ಮಾಡಿ-ಸೋನಿಯಾಗೆ ಪರಮೇಶ್ವರ್ ಮನವಿ

ಸೋಮವಾರ, 20 ಜನವರಿ 2020 (09:59 IST)
ಬೆಂಗಳೂರು : ಕೆಪಿಸಿಸಿ ಗೆ ಶೀಘ್ರದಲ್ಲಿಯೇ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಅಧ್ಯಕ್ಷೆ ಸೋನಿಯಾ ಗಾಂಧಿಗೆ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.



ಈ ಬಗ್ಗೆ ಇಮೇಲ್ ಮೂಲಕ ಮನವಿ ಮಾಡಿರುವ ಪರಮೇಶ್ವರ್, 2013ರ ಮಾದರಿಯಲ್ಲಿ ಕಾಂಗ್ರೆಸ್ ಪುನರುತ್ಥಾನ ಮಾಡಬೇಕು. ಹೀಗಾಗಿ ಸಾಮಾಜಿಕ ನ್ಯಾಯ ಪರಿಗಣಿಸಿ ಅಧ್ಯಕ್ಷರನ್ನ ನೇಮಿಸಿ. ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕದ ಅವಶ್ಯಕತೆ ಸದ್ಯಕ್ಕಿಲ್ಲ. ಖರ್ಗೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.


ಎಸ್.ಆರ್.ಪಾಟೀಲ್ ಬೆಳಗಾವಿ ಕರ್ನಾಟಕ ಪ್ರತಿನಿಧಿಸುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಮೈಸೂರು ಭಾಗವನ್ನು ಪ್ರತಿನಿಧಿಸುತ್ತಿದ್ದಾರೆ. ಡಿಕೆಶಿ ಅಧ್ಯಕ್ಷರಾದ್ರೆ ಬೆಂಗಳೂರು ವಿಭಾಗದವರಾಗುತ್ತಾರೆ .

ಹೀಗಾಗಿ ಕಾರ್ಯಾಧ್ಯಕ್ಷರ ನೇಮಕದ ಬಗ್ಗೆ ಗೊಂದಲಬೇಡ. ಜಾತಿ ಆಧಾರದ ಮೇಲೆ ಕೆಪಿಸಿಸಿಗೆ ಅಧ್ಯಕ್ಷರ ಆಯ್ಕೆ ಬೇಡ ಎಂದು ಇಮೇಲ್ ಮೂಲಕ ಸೋನಿಯಾಗೆ ಮನವಿ ಮಾಡಿದ ಪರಮೇಶ್ವರ್ ಅವರು, ಮಲ್ಲಿಕಾರ್ಜುನ ಖರ್ಗೆ, ಬಿಕೆ ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ ಸಲಹೆಯನ್ನು ಕೂಡ  ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ