ಜಸ್ಪ್ರೀತ್ ಬುಮ್ರಾ ರೀತಿ ಬೌಲಿಂಗ್ ಮಾಡಬಲ್ಲೆ ಎಂದ ಅಭಿಮಾನಿಗೆ ಸಾಕ್ಷಿ ಕೊಡಿ ಎಂದ ಐಸಿಸಿ

ಸೋಮವಾರ, 20 ಜನವರಿ 2020 (09:16 IST)
ದುಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುವ ರೀತಿ ಕಾಪಿ ಮಾಡುವುದು ಸುಲಭವಲ್ಲ. ಆದರೆ ಅವರ ರೀತಿಯೇ ಬೌಲಿಂಗ್ ಮಾಡಬಲ್ಲೆ ಎಂದ ಅಭಿಮಾನಿಯೊಬ್ಬನಿಗೆ ಐಸಿಸಿ ವಿಡಿಯೋ ಸಾಕ್ಷಿ ಕೊಡಿ ಎಂದು ಕೇಳಿದೆ.


ಬೆಂಗಳೂರಿನಲ್ಲಿ ನಡೆದ ಪಂದ್ಯದ ನಡುವೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಅಭಿಮಾನಿ ‘ನಾನು ಬುಮ್ರಾ ರೀತಿ ಬೌಲಿಂಗ್ ಮಾಡಬಲ್ಲೆ’ ಎಂದು ಫಲಕ ಹಿಡಿದಿದ್ದರು. ಈ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಐಸಿಸಿ ಆ ಅಭಿಮಾನಿಯನ್ನು ಟ್ರೋಲ್ ಮಾಡಿದ್ದು ಹಾಗಿದ್ದರೆ ಸಾಕ್ಷಿಗಾಗಿ ವಿಡಿಯೋ ಕೊಡಿ ಎಂದು ಕಾಲೆಳೆದಿದೆ. ಐಸಿಸಿಯ ಈ ಟ್ವೀಟ್ ಭಾರೀ ಜನಪ್ರಿಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ