ಪರಮೇಶ್ವರ್ ಹೈಕಮಾಂಡ್‌ಗೆ ಹಣ ನೀಡಿ ಸಚಿವಗಿರಿ ಪಡೆದಿದ್ದಾರೆ; ಶ್ರೀನಿವಾಸ್ ಪ್ರಸಾದ್
ಮಂಗಳವಾರ, 8 ನವೆಂಬರ್ 2016 (15:44 IST)
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಹಣ ನೀಡಿ ಸಚಿವಗಿರಿ ಪಡೆದಿದ್ದಾರೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.
ನಂಜನಗೂಡಿನಲ್ಲಿ ಆಯೋಜಿಸಲಾದ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ತಂದೆಯ ಹೆಸರಲ್ಲಿ ರಾಜಕೀಯಕ್ಕೆ ಬಂದ ಪರಮೇಶ್ವರ್, ಹಣ ಖರ್ಚು ಮಾಡಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಹೈಕಮಾಂಡ್‌ಗೆ ಹಣ ನೀಡಿ ಸಚಿವಗಿರಿ ಪಡೆದಿದ್ದಾರೆ. ಅವರಿಗೆ ಯಾವುದೇ ಜನಪ್ರಿಯತೆಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರಿಗೆ ಕುತಂತ್ರ ರಾಜಕೀಯ ಮಾಡೋಕೆ ನಾಚಿಕೆಯಾಗುವುದಿಲ್ಲವಾ? ನಾನೇನು ಅವರ ಸಾಮ್ರಾಜ್ಯ ಕೊಡಿ ಎಂದು ಕೇಳಿರಲಿಲ್ಲ. ನನ್ನನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕಾರಣ ಎಂದು ಮಾತ್ರ ಕೇಳಿದ್ದೆ ಎಂದು ಹೇಳಿದರು.
ಉಭಯ ನಾಯಕರು ಮೊದಲು ನನ್ನ ರಾಜಕೀಯ ಜೀವನವನ್ನು ತಿಳಿದುಕೊಳ್ಳಲಿ. 50 ವರ್ಷಗಳ ರಾಜಕೀಯದಲ್ಲಿ ಯಾವತ್ತೂ ಸ್ವಾರ್ಥಕ್ಕಾಗಿ ಬಲಿಯಾಗಿಲ್ಲ. ಜನರ ಪ್ರೀತಿಯೇ ನನಗೆ ಬಹುದೊಡ್ಡ ಬೆಂಬಲವಾಗಿದೆ. ನನ್ನ ಹತ್ತಿರ ಹಣಬಲವಿಲ್ಲ ಜನಬಲವಿದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ