ಪೋಷಕರೇ ಎಚ್ಚರಾ!?....

ಬುಧವಾರ, 27 ಅಕ್ಟೋಬರ್ 2021 (11:20 IST)
ಬೆಳಗಾವಿ : ಪಾತ್ರೆ ತೊಳೆಯಲು ನೀರು ತುಂಬಿಟ್ಟಿದ್ದ ಬಕೆಟ್ನಲ್ಲಿ ಒಂದುವರೆ ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಚಿಕ್ಕೋಡಿ ನಡೆದಿದೆ.
ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು ವಿಜಯ ಮಸರಗುಪ್ಪಿ ಎಂಬ ಮಗು ಕೊನೆಯುಸಿರೆಳೆದಿದೆ. ಮನೆಯ ಅಂಗಳದಲ್ಲಿ ಮಗು ಆಟವಾಡುತ್ತಿತ್ತು, ಈ ವೇಳೆ ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು, ಆದ್ರೆ ಆಕಸ್ಮಿಕವಾಗಿ ಬಕೆಟ್ ಬಳಿ ಬಂದ ಕಂದಮ್ಮ, ಬಕೆಟ್ ಒಳಗೆ ಬಿದ್ದು ಉಸಿರಾಡಲು ಆಗದೆ ಸಾವನ್ನಪ್ಪಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ