Today Gold Rate:‌ ಬಂಗಾರ ಖರೀದಿಸುವ ಪ್ಲಾನ್‌ನಲ್ಲಿರುವವರಿಗೆ ಬಿಗ್‌ ಶಾಕ್‌

Sampriya

ಶುಕ್ರವಾರ, 29 ಆಗಸ್ಟ್ 2025 (08:45 IST)
ಬೆಂಗಳೂರು; ಜುಲೈ ಆರಂಭದಲ್ಲಿ ಕಡಿಮೆ ಆಗಿದ್ದ ಚಿನ್ನದ ಧರದಲ್ಲಿ ಇದೀಗ ದಿಢೀರ್‌ ಏರಿಕೆಯಾಗಿದ್ದು, ಚಿನ್ನ ಖರೀದಿಸುವ ಪ್ಲಾನ್‌ನಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ. 

ಆಗಸ್ಟ್‌ 20ರಂದು  ₹9,180 ಇದ್ದ 22ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ದಿಢೀರನೇ ₹9,406ಕ್ಕೆೇರಿದೆ. ಈ ಮೂಲಕ ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. 

ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನಕ್ಕೆ ₹10,261, 22 ಕ್ಯಾರೆಟ್ ಚಿನ್ನಕ್ಕೆ ₹9,406 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ₹7,696 ಇದೆ. 

ದಿಢೀರನೇ ಬೆಲೆ ಏರಿಕೆಯಿಂದಾಗಿ ವಹಿವಾಟುವಿನಲ್ಲಿ ಕುಸಿತ ಕಂಡಿದ್ದರಿಂದ ನಿಧಾನಗತಿಯಲ್ಲಿ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೇ ಚಿನ್ನದ ಬೆಲೆ ಗಗನಕ್ಕೇರಿದ್ದು, ಹೀಗೇ ಮುಂದುವರೆದ್ದಲ್ಲಿ, ಮತ್ತೇ ಚಿನ್ನದ ವಹಿವಾಟುವಿನಲ್ಲಿ ಕುಸಿತ ಕಾಣುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ