ಶಿಕ್ಷಣ ಇಲಾಖೆಯ ಆದೇಶದಿಂದ ಆತಂಕಕ್ಕೆ ಹೀಡಾದ ಪೋಷಕರು

ಶನಿವಾರ, 30 ಜುಲೈ 2022 (10:28 IST)
ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಪೋಷಕರನ್ನು ಆತಂಕಕ್ಕೆ ತಳ್ಳಿದೆ. ಸರ್ಕಾರದ ಈ ಆದೇಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಜೂನ್ ವೇಳೆಗೆ ಮಗುವಿಗೆ ಆರು ವರ್ಷ ಆಗದಿದ್ರೆ, ಮತ್ತೊಮ್ಮೆ ಯುಕೆಜಿ ತರಗತಿಯಲ್ಲಿ ಕುಳಿತುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಮಗು ಒಂದು ವರ್ಷ ಯುಕೆಜಿ ತರಗತಿ ಪುನರಾವರ್ತಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್ ಆರ್. ಸುತ್ತೋಲೆ ಹೊರಡಿಸಿದೆ. ಸದ್ಯ ಒಂದನೇ ತರಗತಿಗೆ ಸೇರಲು ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು. ಆದರೆ 2023ರ ಶೈಕ್ಷಣಿಕ ವರ್ಷದಿಂದ ಮಗುವಿಗೆ ಕನಿಷ್ಠ 6 ವರ್ಷ ಆಗಿರಬೇಕು ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ. ಇನ್ನು ಪಾಲಿಕೆ ಅಧಿಕಾರಿಗಳು ನಮಗೂ ಇದಕ್ಕೆ ಸಂಭ್ರಮವೇ ಇಲ್ಲದಂತೆ ನಡೆದುಕೊಳ್ಳುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ