ರಾಷ್ಟ್ರಧ್ವಜ ಮದರಸಾಗಳ ಮೇಲೆ ಹಾರಿಸುವುದು ಕಡ್ಡಾಯ- ಶಿಕ್ಷಣ ಇಲಾಖೆಯ ಆದೇಶ

ಬುಧವಾರ, 27 ಜುಲೈ 2022 (20:09 IST)
ಸ್ವಾತಂತ್ರ್ಯೋತ್ಸವದ ಅಜಾದಿಕಾ ಅಮೃತಮಹೋತ್ಸವದ ಪ್ರಯುಕ್ತ ರಾಜ್ಯದ ಎಲ್ಲಾ ಶಾಲಾ,ಕಾಲೇಜು, ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಾಟ ಕಡ್ಡಾಯ ಮಾಡಲಾಗಿದೆ. ಇನ್ನು ಸರ್ಕಾರಿ, ಖಾಸಗಿ, ಅನುದಾನಿತ,ಅನುದಾನ ರಹಿತ ಶಾಲಾ ಕಾಲೇಜು, ಮದರಸಾಗಳಿಗೂ ಈ ನಿಯಮ ಅನ್ವಯವಾಗಿದೆ.ಇನ್ನು ಎಲ್ಲಾ ಶಿಕ್ಷಣ ಸಿಬ್ಬಂದಿಗಳು ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸೋದು ಕಡ್ಡಾಯವಾಗಿದ್ದು,ಆಗಸ್ಟ್ 11 ರಿಂದ 17 ರವರೆಗೆ, 6 ದಿನ ರಾಷ್ಟ್ರ ಧ್ವಜ ಹಾರಿಸಬೇಕು.ಇನ್ನು ಯಾವುದೇ ಮದರಸಾಗಳು ಕುಂಟು ನೆಪ ಹೇಳದೆ ರಾಷ್ಟ್ರ ಧ್ವಜ ಹಾರಿಸಬೇಕು, ಸರ್ಕಾರದ ಸೌಲಭ್ಯ ಪಡೆಯುವವರು ಸರ್ಕಾರದ ನಿಯಮ ಪಾಲಿಸೋದು ಕಡ್ಡಾಯವಾಗಿದೆ.ಶಾಲಾ ಕಾಲೇಜು, ಮದರಸಾಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಗೀತಗಾಯನ, ಪ್ರಭಂದ, ಕ್ವಿಜ್, ಸ್ವಾತಂತ್ರ್ಯ ಹೋರಾಟಗಾರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಬೇಕೆಂದು ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ