ಚುನಾವಣೆ ಹೊಸ್ತಿಲಲ್ಲಿ ಪಕ್ಷಸೇರ್ಪಡೆ ಪರ್ವ

ಗುರುವಾರ, 6 ಏಪ್ರಿಲ್ 2023 (18:17 IST)
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ  ಮತ್ತಷ್ಟು ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಾಗಮಂಗಲ ಕ್ಷೇತ್ರದ ಮಾಜಿ ಸಂಸದ ಶಿವರಾಮೇಗೌಡ ಜೊತೆಗೆ ಅವರ ಬೆಂಬಲಿಗರು ಕೂಡ ಬಿಜೆಪಿ ಕದ ತಟ್ಟಿದ್ದು, ಅಧಿಕೃತವಾಗಿ ಕಮಲವನ್ನು ಹಿಡಿದಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಮಂಡ್ಯದ ಮಾಜಿ ಸಂಸದ ಎಲ್.‌ ಆರ್. ಶಿವರಾಮೇ ಗೌಡ, ಪ್ರಮುಖರಾದ ಯೋಗೇಶ್ ಬೆಸ್ತದ್, ರಾಮಪ್ಪ, ಮಂಜು ಹಾಗೂ ಕೂಡ್ಲಿಗಿ ಅಭ್ಯರ್ಥಿ ಲೋಕೇಶ್ ನಾಯಕ್ ಅವರ ಬೆಂಬಲಿಗರು ಬಿಜೆಪಿ‌ಗೆ ಸೇರ್ಪಡೆಗೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ