ಪಕ್ಷದ ಪ್ರಣಾಳಿಕೆ ರಿಲೀಸ್ : ಜನಾರ್ದನ ರೆಡ್ಡಿ
ಸೋಮವಾರ, 2 ಜನವರಿ 2023 (15:23 IST)
ಬೆಂಗಳೂರು : ಯಾವತ್ತಿದ್ದರೂ ಅಧಿಕಾರಕ್ಕೆ ಬರಬೇಕು, ಸೇವೆ ಮಾಡಬೇಕು ಅನ್ನೋ ವಿಶ್ವಾಸದಲ್ಲೇ ನಾನೊಂದು ದೊಡ್ಡ ಹೆಜ್ಜೆ ಇಟ್ಟಿದ್ದೇನೆ.
ಇನ್ನೂ 15 ದಿನಗಳಲ್ಲಿ ನನ್ನ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ಎನ್ಪಿಎಸ್ (ನೂತನ ಪಿಂಚಣಿ ಯೋಜನೆ) ವಿರೋಧಿಸಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದ್ದಾರೆ.
ಎಲ್ಲರೂ ಹೊಸ ವರ್ಷದ ಸಂಭ್ರಮ ಮಾಡುತ್ತಿದ್ದರೆ, ನೀವು ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿದ್ದೀರಿ ಎನ್ನುವುದನ್ನು ತಿಳಿದೇ ನಾನಿಲ್ಲಿಗೆ ಬಂದಿದ್ದೇನೆ.
ಸರ್ಕಾರಿ ನೌಕರರ ಪರಿಸ್ಥಿತಿ ನನಗೂ ಗೊತ್ತು. ನನ್ನ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿದ್ದು ನಿವೃತ್ತರಾಗಿದ್ದರು ಎಂದು ಹೇಳಿದ್ದಾರೆ.