ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ನೈತಿಕತೆಯನ್ನು ಬೆಳಸಿಕೊಳ್ಳಬೇಕು. ರಾಜ್ಯಸಭೆಗೆ ಹಣವಂತರು, ಉದ್ಯಮಿದಾರರನ್ನು ಕಣಕ್ಕಿಳಿಸುವ ಬದಲು ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟರೆ ವೋಟಿಗಾಗಿ ನೋಟು ಪ್ರಕರಣವನ್ನು ತಡೆಯಬಹುದಾಗಿತ್ತು ಎಂದು ಸಲಹೆ ನೀಡಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಮತ ನೀಡಲು ಶಾಸಕರಿಂದ ಕೋಟಿ ಕೋಟಿ ಹಣದ ಬೇಡಿಕೆ ಪ್ರಕರಣ ಕುರಿತು ನನ್ನ ಗಮನಕ್ಕೆ ಯಾರು ತಂದಿಲ್ಲ. ಸ್ಟಿಂಗ್ ಆಪರೇಶನ್‌ನಲ್ಲಿ ಕಾಣಿಸಿಕೊಂಡಿರುವವರ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲಾ. ಶಾಸಕರೇನು ಗುಮಾಸ್ತರೆ. ರಾಜಕಾರಣೆಗಳು ಮೊದಲು ನೈತಿಕತೆಯನ್ನು ಬೆಳೆಸಿಕೊಳ್ಳಲಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.