ಸೌಮ್ಯಾ ರೆಡ್ಡಿಯಿಂದ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ

Sampriya

ಶನಿವಾರ, 22 ಫೆಬ್ರವರಿ 2025 (17:33 IST)
Photo Courtesy X
ಪ್ರಯಾಗ್‌ರಾಜ್‌: ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮವಾದ ಮಹಾಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ಕೊನೆಗೊಳ್ಳಲು ಕೇವಲ ನಾಲ್ಕು ದಿನ ಬಾಕಿ ಇದೆ.

ಇನ್ನೂ ಶಿವರಾತ್ರಿ ಹತ್ತಿರ ಬರುತ್ತಿರುವ ಹಿನ್ನೆಲೆ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಇದೀಗ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ ಅವರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

ಈಗಾಗಲೇ ತ್ರಿವೇಣಿ ಸಂಗಮದಲ್ಲಿ ರಾಜಕಾರಣಿಗಳಾದ ಡಿಸಿಎಂ ಡಿಕೆ ಶಿವಕುಮಾರ್ ಫ್ಯಾಮಿಲಿ ಪವಿತ್ರಾ ಸ್ನಾನ ಮಾಡಿದರು.

ತ್ರಿವೇಣಿ ಸಂಗಮ ಪ್ರಯಾಗ್‌ರಾಜ್ - ಮೂರು ನದಿಗಳ ಪವಿತ್ರ ಸಂಗಮ 'ತ್ರಿವೇಣಿ' ಎಂದರೆ. 'ಮೂರು ನದಿಗಳು' ಆದರೆ 'ಸಂಗಮ್' ಎಂದರೆ ಇಂಗ್ಲಿಷ್‌ನಲ್ಲಿ 'ಸಂಗಮ'. ತ್ರಿವೇಣಿ ಸಂಗಮವು ಮೂರು ನದಿಗಳ ಸಂಗಮವಾಗಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ಸ್ಥಳ ಪ್ರಯಾಗ್‌ರಾಜ್ ತ್ರಿವೇಣಿ ಸಂಗಮವಾಗಿದೆ .



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ