ಬಿಎಂಟಿಸಿ ಸಂಸ್ಥೆಯಿಂದ ಸಂಚಾರಿ ದಂಡ ಪಾವತಿ

ಭಾನುವಾರ, 5 ಮಾರ್ಚ್ 2023 (16:26 IST)
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇ.50ರ ರಿಯಾತ್ತಿ ನೀಡಿತ್ತು ,ಮೊನ್ನೆಯಷ್ಟೇ ಈ ಆಫರ್ ಮಾರ್ಚ್ 14ರವರೆಗೆ ವಿಸ್ತರಣೆ ಮಾಡಿದೆ.ಫೆಬ್ರವರಿಯಲ್ಲಿ ನೀಡಿದ ಆಫರ್​ಗೆ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ರೀತಿ ಫೆಬ್ರವರಿಯಲ್ಲಿ ನೂರು ಕೋಟಿಗೂ ಅಧಿಕ ಹಣ ಸಂಗ್ರಹವಾಗಿತ್ತು. ಜನರು ರಿಯಾಯ್ತಿ ಪಡೆದು ತಮ್ಮ ವಾಹನಗಳ ಮೇಲಿನ ದಂಡವನ್ನು ಪಾವತಿಸಿದ್ದರು.ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹ ಶೇ.50ರ ರಿಯಾಯ್ತಿ ಪಡೆದು  1ಕೋಟಿಗೂ ಹೆಚ್ಚು ದಂಡ ಕಟ್ಟಬೇಕಿದ್ದ ಬಿಎಂಟಿಸಿ 33 ಲಕ್ಷರೂಪಾಯಿ ದಂಡವನ್ನು ಪಾವತಿಸಿದೆ. ಬಿಎಂಟಿಸಿ ಈ ನಿಟ್ಟಿನಲ್ಲಿ ಎಲ್ಲಾ ಬಸ್ ಚಾಲಕರಿಗೂ ಟ್ರಾಫಿಕ್ ರೂಲ್ಸ್, ಸೆಫ್ಟಿ ಡ್ರೈವಿಂಗ್‌ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲು ಬಿಎಂಟಿಸಿ ತೀರ್ಮಾನಿಸಿದ್ದು,ಈ ಮೂಲಕ ಸಾರ್ವಜನಿಕರಿಗೆ ಉತ್ತಮ ಮತ್ತು ಸುರಕ್ಷಿತ ಸೇವೆ ನೀಡಲು ಬಿಎಂಟಿಸಿ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ