ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ ಬಿಎಂಟಿಸಿ

ಭಾನುವಾರ, 5 ಮಾರ್ಚ್ 2023 (10:16 IST)
ಬೆಂಗಳೂರು : ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ ಚಾಲಕರು ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ.

ನಗರದಲ್ಲಿ ಬಿಎಂಟಿಸಿ ಬಸ್ ಚಾಲಕರ ರ್ಯಾಷ್ ಡ್ರೈವಿಂಗ್ಗೆ ಹಲವು ಜೀವಗಳು ಬಲಿಯಾಗಿವೆ. ರ್ಯಾಷ್ ಡ್ರೈವಿಂಗ್ ಜೊತೆ ಟ್ರಾಫಿಕ್ ರೂಲ್ಸ್ ಸಹ ಬ್ರೇಕ್ ಮಾಡಿ ನಿಗಮಕ್ಕೆ ಬರೋಬ್ಬರಿ 1 ಕೋಟಿ ನಷ್ಟವುಂಟುಮಾಡಿದ್ದಾರೆ.

12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಕೇಸ್ಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪಕ್ಕಾ ಕೇಸ್ ಗಳಲ್ಲಿ 66 ಲಕ್ಷ ರೂ. ದಂಡದಲ್ಲಿ, ಟ್ರಾಫಿಕ್ ಪೊಲೀಸರ ಶೇ.50 ಆಫರ್ ಮೂಲಕ 33 ಲಕ್ಷ ರೂ. ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ