ಜಿಪಂ ಸಿಇಒ ಕೂರ್ಮಾರಾವ್ ವರ್ಗಾವಣೆಗೆ ವಿರೋಧ

ಸೋಮವಾರ, 27 ಮಾರ್ಚ್ 2017 (15:52 IST)
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೂರ್ಮಾರಾವ್ ದಕ್ಷ ಅಧಿಕಾರಿಯಾಗಿದ್ದರಿಂದ ಯಾವುದೇ ಕಾರಣಕ್ಕೂ ಅವರ ವರ್ಗಾವಣೆ ಬೇಡ ಎಂದು 500ಕ್ಕೂ ಹೆಚ್ಚು ಸರಕಾರಿ ನೌಕರು ಪ್ರತಿಭಟನೆ ಆರಂಭಿಸಿದ್ದಾರೆ.
ಕೂರ್ಮಾರಾವ್ ದಕ್ಷ ಅಧಿಕಾರಿಯಾಗಿದ್ದರಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಕೇವಲ ರಾಜಕೀಯ ಒತ್ತಡದಿಂದ ಅವರನ್ನು ವರ್ಗ ಮಾಡಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.
 
ಜಿಪಂ ಸಿಇಒ ಕೂರ್ಮಾರಾವ್ ಅವರನ್ನು ಸಿಬ್ಬಂದಿ ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ಅವರು ಬೇಡವೆಂದರೂ ನಾವು ಎತ್ತಿಕೊಂಡು ಹೋಗಿದ್ದೇವೆ ಎಂದು ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಅವರನ್ನು ವರ್ಗಾಯಿಸಲಾಗುತ್ತಿದೆ ಎನ್ನುವ ವರದಿಗಳು ಜಿಲ್ಲೆಯ ಜನತೆಯಲ್ಲಿ ಆಕ್ರೋಶ ಮೂಡಿಸಿವೆ.
 
ಜೆಡಿಎಸ್ ಶಾಸಕ ಮಾನಪ್ಪ ವಜ್ವಲ್ ಇಂದು ಅಧಿವೇಶನದಲ್ಲಿ ಕೂರ್ಮರಾವ್ ಅವರನ್ನು ಕೂಡಲೇ ವರ್ಗಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ