ಪೊಲೀಸ್ ರ ಡಿಫರೆಂಟ್ ಸಂಭ್ರಮಾಚರಣೆಗೆ ಜನರು ಫುಲ್ ಫಿದಾ

ಗುರುವಾರ, 22 ಆಗಸ್ಟ್ 2019 (19:12 IST)
ಕೆಲವು ವರ್ಷ ಸರಕಾರಿ ಕೆಲಸಮಾಡಿ  ವಿ ಆರ್ ಎಸ್  ಕೊಟ್ಟು  ಹಾಯಾಗಿರೋದು ಸಾಮಾನ್ಯ.  ಆದ್ರೆ ಇದಕ್ಕೆ ಅಪವಾದ ಎನ್ನುವಂತೆ ಸಂಭ್ರಮಾಚರಣೆ ಮಾಡೋರಿದ್ರೆ ಅವರು ಹೇಗಿರಬೇಡ?

ತಾವು ಕೆಲಸಕ್ಕೆ ಸೇರಿ 20 ವರ್ಷಗಳು ಗತಿಸಿದವು ಅಂತ ಸಂಭ್ರಮ ಪಟ್ಟಿರೋರು ಇಲ್ಲಿದ್ದಾರೆ.  

ಚಿತ್ರದುರ್ಗದಲ್ಲಿ  1999 ನೇ ಸಾಲಿನ ಡಿಆರ್‍(ಮೀಸಲು ಪೊಲೀಸ್) ನೂರು ಜನ ಡಿಆರ್‍ ಪೊಲೀಸರು  20 ವರ್ಷ ಕೆಲಸ ಮಾಡಿದ ಬಗ್ಗೆ ಸಂಭ್ರಮಾಚರಣೆ ಆಚರಿಸಿದ್ರು. ಸಂಭ್ರಮಾಚರಣೆ ಕೂಡಾ ವಿನೂತನವಾಗಿತ್ತು. ರಕ್ತದಾನ, ಕಣ್ಣು ಮತ್ತು ದೇಹದಾನ ಮಾಡುವುದರ ಮೂಲಕ ಆಚರಿಸಿದ್ರು.

ಡಿಆರ್ ಸೇವೆಯಲ್ಲಿ ಕೆಲಸ ಮಾಡುತ್ತಿರುವಾಗ  ಮರಣ ಹೊಂದಿದ 8 ಕುಟುಂಬಕ್ಕೆ ವೈದ್ಯಕೀಯ ಸೇವೆ ಮತ್ತು  ಶೈಕ್ಷಣಿಕ ವೆಚ್ಚವನ್ನ ಈ ಬ್ಯಾಚ್ ನ ಪೊಲೀಸರೇ ತಮ್ಮ ಖರ್ಚಿನಿಂದ ಕೊಡಲಿದ್ದಾರೆ. ಈ ಪೊಲೀಸ್ ರ ಕ್ರಮಕ್ಕೆ ಜನರು ಫುಲ್ ಫಿದಾ ಆಗಿ ಸೆಲ್ಯೂಟ್ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ