ಹುತಾತ್ಮರ ದಿನದಂದು ಗಾಂಧೀಜಿ ಪ್ರತಿಕೃತಿಗೆ ಗುಂಡಿಟ್ಟ ಹಿಂದೂ ಮಹಾಸಭಾ ನಾಯಕಿ ಅರೆಸ್ಟ್
ಗುರುವಾರ, 7 ಫೆಬ್ರವರಿ 2019 (15:31 IST)
ನವದೆಹಲಿ : ಹುತಾತ್ಮರ ದಿನದಂದು ಮಹಾತ್ಮ ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಟ್ಟು ಸಂಭ್ರಮಾಚರಣೆ ನಡೆಸಿದ್ದ ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆರನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 30 ರಂದು ಪೂಜಾ ಶಕುನ್ ಪಾಂಡೆ, ನಾಥೂರಾವ್ ಗೋಡ್ಸೆ ಫೋಟೋಕ್ಕೆ ಹೂಮಾಲೆ ಹಾಕಿ ಜೈಕಾರ ಹಾಕಿ, ಮಹಾತ್ಮ ಗಾಂಧೀಜಿಯವರ ಪ್ರತಿಕೃತಿಗೆ ಆಟಿಕೆ ಗನ್ ಇಟ್ಟು ನಾಥೂರಾವ್ ಗೋಡ್ಸೆ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ಸನ್ನಿವೇಶವನ್ನು ಮರು ನಿರ್ಮಿಸಿದ್ದರು. ಅಲ್ಲದೇ ಗಾಂಧೀಜಿ ಅವರ ಸಾವನ್ನಪ್ಪಿದ ದಿನವನ್ನು ಶೌರ್ಯ ದಿನ ಎಂದು ಆಚರಣೆ ಮಾಡಿ ಸಿಹಿ ಕೂಡ ಹಂಚಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ನಾಪತ್ತೆಯಾಗಿದ್ದ ಹಿಂದೂ ಮಹಾಸಭಾ ನಾಯಕಿ ಶಕುನ್ ಪಾಂಡೆಯನ್ನು ಪೊಲೀಸರು ಪತ್ತೆ ಮಾಡಿ ಬಂಧನ ಮಾಡಿದ್ದಾರೆ. ಅಲ್ಲದೇ ಆಕೆಯ ಪತಿ ಅಶೋಕ್ ಪಾಂಡ್ಯರನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.