ಕಾಡಾನೆ ಹಾವಳಿಗೆ ಜನರು ತತ್ತರ

ಭಾನುವಾರ, 8 ಜುಲೈ 2018 (15:04 IST)
ಆ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹಗಲಿನಲ್ಲಿ ರಾಜಾರೋಷವಾಗಿ ತಿರುಗಾಡುತ್ತಿರುವ ಕಾಡಾನೆಗಳ ಹಿಂಡು ಜನರಲ್ಲಿ ತೀವ್ರ ಭಯ ಉಂಟುಮಾಡುತ್ತಿವೆ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಬೆಳೆಗಾರರನ್ನು ಕಂಗೆಡಿಸಿವೆ.

ಕಾಡಾನೆ ಹಾವಳಿ ತಡೆಗೆ ಕೊಡಗು ಅರಣ್ಯ ಇಲಾಖೆ ವಿಫಲ ವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಕಾಡಾನೆ ಹಾವಳಿ ತಡೆಗೆ ಸೋಲಾರ್ ಬೇಲಿ, ಆನೆ ಕಂದಕ, ಕಾಂಕ್ರಿಟ್ ಪಿಲ್ಲರ್ ,ಮುಳ್ಳು ಬೇಲಿ ಸೇರಿದಂತೆ ಹಲವು ಯೋಜನೆಗಳೆಲ್ಲವೂ ದಾಟಿ ಗ್ರಾಮಗಳತ್ತ ಬರುತ್ತಿರುವ ಕಾಡಾನೆಗಳ ಹಿಂಡು ಜನರಲ್ಲಿ ಚಿಂತೆಗೆ ಕಾರಣವಾಗುತ್ತಿವೆ. ಸೋಮವಾರಪೇಟೆ  ತಾಲ್ಲೂಕಿನ ಸುಂಟಿಕೊಪ್ಪ ಚೆಟ್ಟಳ್ಳಿ  ಮಾರ್ಗದ ರಸ್ತೆಯಲ್ಲಿಯೇ ಕಾಫಿ ತೋಟದಿಂದ ಅರಣ್ಯ ದತ್ತ ಹೋಗುತ್ತಿರುವ ಕಾಡಾನೆಗಳ ಹಿಂಡು, ವಿರಾಜಪೇಟೆ ತಾಲ್ಲೂಕಿನ ಹಲವೆಡೆ  ಕಾಡಾನೆಗಳುರಸ್ತೆ ದಾಟುತ್ತಿರುವ ದೃಶ್ಯ ಸೆರೆಯಾಗಿವೆ.

ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಕೃಷಿ ಫಸಲು ತುಳಿದು ಹಾನಿ ಮಾಡುವುದರೊಂದಿಗೆ ಕಾರ್ಮಿಕರು ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರನ್ನು ಭಯ ಮೂಡಿಸುತ್ತಿದೆ. ಶಾಶ್ವತವಾಗಿ ಕಾಡಾನೆ ಹಾವಳಿಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ