ಕ್ಯೂ ತಪ್ಪಿಸಿದ ಶಾಸಕ ಕೃಷ್ಣಪ್ಪಗೆ ಜನರ ತರಾಟೆ
ವಿಜಯನಗರದ ಮತಗಟ್ಟೆ ಸಂಖ್ಯೆ 175 ರಲ್ಲಿ ಮತ ಚಲಾಯಿಸಲು ಬಂದ ಕೃಷ್ಣಪ್ಪ ಸರತಿ ಸಾಲು ತಪ್ಪಿಸಿ ಮೊದಲೇ ಮತ ಚಲಾಯಿಸಲು ಹೊರಟಾಗ ಸರತಿಯಲ್ಲಿ ನಿಂತಿದ್ದ ಜನ ತರಾಟೆಗೆ ತೆಗೆದುಕೊಂಡರು. ಬಳಿಕ ಶಾಸಕರು ನಿರ್ವಾಹವಿಲ್ಲದೇ ಇತರರಂತೇ ಸರತಿ ನಿಲ್ಲಬೇಕಾಯಿತು.
ಇನ್ನು ರಾಮನಗರ ಕ್ಷೇತ್ರದ ಮತಗಟ್ಟೆ 74 ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು, ಮತದಾನ ಪ್ರಕ್ರಿಯೆ ವಿಳಂಬವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.