ಚಂದ್ರಗ್ರಹಣ ಕಣ್ತುಂಬಿಕೊಂಡ ಜನ
ರಾತ್ರಿ 1.04 ಕ್ಕೆ ಗ್ರಹಣ ಗೋಚರಿಸಿತು. 1.44 ಕ್ಕೆ ಮಧ‍್ಯಕಾಲ ಮತ್ತು 2.22 ಕ್ಕೆ ಮೋಕ್ಷವಾಗಿದೆ. 3.55 ಕ್ಕೆ ಸಂಪೂರ್ಣವಾಗಿ ಗ್ರಹಣ ಮೋಕ್ಷವಾಗಿದೆ. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನೂರಾರು ಜನ ಗ್ರಹಣ ವೀಕ್ಷಿಸಿದರು.
ಇದೀಗ ಬೆಳ್ಳಂ ಬೆಳಿಗ್ಗೆಯೇ ದೇವಾಲಯಗಳಲ್ಲಿ ಶುದ್ದೀಕರಣ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ನಿನ್ನೆ ರಾತ್ರಿ ಬಹುತೇಕ ದೇವಾಲಯಗಳಲ್ಲಿ ಚಂದ್ರಗ್ರಹಣ ನಿಮಿತ್ತ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇಂದು ವಿಶೇಷ ಪೂಜೆ ನಡೆಸಲಾಗುತ್ತಿದೆ.