ಇದು ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತಿದೆ. ಇಂತಹ ಸಾಧನೆಯನ್ನು ಮಾಡಿದಾಗ, ಜಗತ್ತು ನಮ್ಮ ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಥ್ ನೀಡುತ್ತದೆ. ಈ ಸಾಮರ್ಥ್ಯವು ಪ್ರಪಂಚದ ಮುಂದೆ ಇಟ್ಟಾಗ ಹಲವಾರು ಅವಕಾಶಗಳು ಭಾರತದ ಬಾಗಿಲುಗಳನ್ನು ತಟ್ಟುತ್ತವೆ ಎಂದು ಮೋದಿ ಹೇಳಿದರು.
ಇಂದು ನಡೆಯುವ ಅಧಿವೇಶನ ಚಿಕ್ಕದ್ದು, ಆದರೆ ಇದರ ಸಮಯ ದೊಡ್ಡದು, ಇದು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿವೇಶನವಾಗಿದೆ. ಈ ಅಧಿವೇಶನ ಒಂದು ವಿಶೇಷತೆ ಎಂದರೆ 75 ವರ್ಷಗಳ ಪ್ರಯಾಣ. ಇನ್ನು ಈ ಹೊಸ ಗಮ್ಯಸ್ಥಾನ ಈ ಪ್ರಯಾಣವನ್ನು ಮಾಡಲಿದೆ. ಅಂದರೆ ಹೊಸ ಸಂಸತ್ ಭವನಕ್ಕೆ ಹೋಗುತ್ತಿದೆ. 2047ರ ವೇಳೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡಬೇಕು. ಇದಕ್ಕಾಗಿ ಮುಂದೆ ಎಲ್ಲ ನಿರ್ಧಾರವನ್ನು ಹೊಸ ಸಂಸತ್ ಭವನದಲ್ಲಿ ತೆಗೆದುಕೊಳ್ಳಲಾಗುತ್ತದೆ.