ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮನವಿ ಹಿನ್ನೆಲೆಯಲ್ಲಿ ಒಪೆಕ್ ಮತ್ತು ರಷ್ಯಾ ಸರಕಾರಗಳು ತೈಲ ಉತ್ಪಾದನೆಯ ಪ್ರಮಾಣವನ್ನು 4 ಲಕ್ಷ ಬ್ಯಾರೆಲ್ಸ್ ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಆಗಸ್ಟ್ ನಿಂದ ಹೆಚ್ಚಿಸುವ ಚಿಂತನೆ ಇದ್ದರೂ ಯಾವುದೇ ಕ್ಷಣದಲ್ಲಿ ಈ ನಿಯಮ ಜಾರಿಗೆ ಬರಬಹುದು. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿ, ದೇಶದಲ್ಲಿ ಇದರ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.