ನಾಲ್ಕು ದಿನಗಳಲ್ಲಿ ನಾಲ್ಕನೇ ಬಾರಿಗೆ ಏರಿಕೆಯಾಗಿರುವ ತೈಲ ದರ

ಶನಿವಾರ, 26 ಮಾರ್ಚ್ 2022 (20:55 IST)
ಪೆಟ್ರೋಲ್‌ ಮತ್ತು ಡೀಸೆಲ್‌ ದರವು ಶನಿವಾರ 3.35 ಪೈಸೆಯಷ್ಟು ಏರಿಕೆಯಾಗಿದೆ.  ಕಳೆದ ನಾಲ್ಕು ದಿನಗಳಲ್ಲಿ ನಾಲ್ಕನೇ ಬಾರಿಗೆ ಏರಿಕೆಯಾಗಿರುವ ತೈಲ ದರವು ಪ್ರತಿ ಲೀಟರ್‌ಗೆ ಒಟ್ಟು ರೂ. 3.35ರಷ್ಟು ಹೆಚ್ಚಳವಾಗಿದೆ.
 
ಮಂಗಳವಾರ, ಬುಧವಾರ ಪೆಟ್ರೋಲ್‌, ಡೀಸೆಲ್‌ ದರ ಏರಿಸಲಾಗಿತ್ತು. ಈಗ ಮತ್ತೆ ಶನಿವಾರ 82 ಪೈಸೆಯಷ್ಟು ಏರಿಕೆಯಾಗಿದೆ. ಸುಮಾರು ನಾಲ್ಕೂವರೆ ತಿಂಗಳ ಅಂತರದ ಬಳಿಕ, ಅಂದರೆ ಪಂಚರಾಜ್ಯಗಳ ಚುನಾವಣೆ ಬಳಿಕ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆಯಾಗುತ್ತಿದೆ.
 
ದಿಲ್ಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ರೂ. 97.81 ಮತ್ತು ಡೀಸೆಲ್‌ ದರ ರೂ. 89.07 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್‌ಗೆ 88 ಮತ್ತು 14 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್‌ ದರ ಲೀಟರಿಗೆ ರೂ.103.93 ಮತ್ತು ಡೀಸೆಲ್ ದರ ಲೀಟರಿಗೆ ರೂ.88.14 ಪೈಸೆ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ