ಬೆಂಗಳೂರಲ್ಲಿ ಪಿಜಿಗಳು ದುಬಾರಿ!
ಬೆಲೆ ಏರಿಕೆಗಳ ಪಟ್ಟಿಗೆ ಬೆಂಗಳೂರಿನ ಪಿಜಿಗಳು ಸೇರ್ಪಡೆಯಾಗಿವೆ. ಹೌದು ಕಳೆದ ಎರಡು ತಿಂಗಳಿನಿಂದ ಉದ್ಯಾನ ನಗರಿಯಲ್ಲಿ ಪಿಜಿಗಳ ದರಗಳು ಹೆಚ್ಚಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹೆಚ್ಚು ಹಣ ಪಾವತಿ ಮಾಡುವುದು ಅನಿವಾರ್ಯವಾಗಿದೆ. ಶಿಕ್ಷಣ, ಉದ್ಯೋಗಕ್ಕಾಗಿ ಬೆಂಗಳೂರು ನಗರಕ್ಕೆ ದೇಶ, ವಿದೇಶದಿಂದ ಆಗಮಿಸುತ್ತಾರೆ. ಎಲ್ಲರೂ ಬಾಡಿಗೆ ಮನೆ ಮಾಡಿಕೊಂಡು ಇರುವುದಿಲ್ಲ. ಆದ್ದರಿಂಂದ ಪಿಜಿ ವಾಸ್ತವ್ಯದ ಮೊರೆ ಹೋಗುತ್ತಾರೆ. ಅದಕ್ಕಾಗಿ ಮನೆಗಳ ಬಾಡಿಗೆ ಹೆಚ್ಚಾಗುತ್ತಿರುವ ಹಾಗೆಯೇ ಈಗ ಪಿಜಿಗಳಿಗೆ ಭಾರೀ ಡಿಮಾಂಡ್ ಇದೆ. ಬೆಂಗಳೂರು ನಗರದ ಹಲವು ಐಟಿ ಕಂಪನಿಗಳು ಅಕ್ಟೋಬರ್‌ನಿಂದ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಡಿತಗೊಳಿಸಿವೆ. ಆಫೀಸ್‌ಗೆ ಬರುವುದುದ ಕಡ್ಡಾಯ ಎಂದು ಹೇಳಿವೆ. ಕೆಲವು ಕಂಪನಿಗಳು ನವೆಂಬರ್‌ನಿಂದ ಆಫೀಸಿಗೆ ಬನ್ನಿ ಎಂದು ಇ-ಮೇಲ್ ಕಳಿಸಿವೆ.