ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

ಬುಧವಾರ, 8 ಮಾರ್ಚ್ 2023 (10:52 IST)
ಹಾಸನ : ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡರಿಂದ ಮತದಾರರಿಗೆ ಭರಪೂರ ಉಡುಗೊರೆ ನೀಡಲಾಗುತ್ತಿದೆ.
 
ಅಷ್ಟಲಕ್ಷ್ಮಿ ಪೂಜೆ, ಬಾಗಿನ ಎಂಬ ಹೆಸರಿನಲ್ಲಿ ಕ್ಷೇತ್ರದ ಮಹಿಳೆಯರಿಗೆ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚುತ್ತಿದ್ದಾರೆ. ಮಹಿಳೆಯರಿಗೆ ಉಡುಗೊರೆ ಹಂಚುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಅಡ್ಡಿಯಾಗುವ ಕಾರಣಕ್ಕೆ ಪ್ರತಿದಿನ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಉಡುಗೊರೆ ನೀಡಲಾಗುತ್ತಿದೆ. ಈ ಹಿಂದೆಯೂ ಗೌರಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ, ಬಳೆ, ಕುಂಕುಮ, ಪುರುಷರಿಗೆ ಪಂಚೆ, ಶರ್ಟ್ ಅನ್ನು ಶಾಸಕ ಪ್ರೀತಂ ಗೌಡ ಉಡುಗೊರೆಯಾಗಿ ನೀಡಿದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ