ರಾಮನಗರ: ಅಲ್ಲಿಇಲ್ಲಿ ಪ್ಲಾಸ್ಟಿಕ್ ಮೊಟ್ಟೆ, ಅಕ್ಕಿ, ಸಕ್ಕರೆ ಕಂಡುಬರುತ್ತಿದೆ ಎಂಬ ಸುದ್ದಿಯನ್ನು ನೋಡಿದ್ದೆವು. ಆದರೆ ಈಗ ರಾಜ್ಯದ ರಾಮನಗರ ಹಾಗೂ ಮಾಗಡಿ ಪಟ್ಟಣದಲ್ಲಿಯೂ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಕಾಲಿಟ್ಟಿದ್ದು, ಜನತೆ ಕಂಗಾಲಾಗಿದ್ದಾರೆ.
ಇದೇ ವೇಳೆ ಮಾಗಡಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿ ಜನರಲ್ಲಿ ಆತಂಕ ಉಂಟುಮಾಡಿದೆ. ಮಾಗಡಿ ಪಟ್ಟಣದ ಕಲ್ಯಾಗೇಟ್ ಬಳಿ ಇರುವ ಲಕ್ಷಿದೇವಿ ಎಂಬುವರ ಮನೆಯಲ್ಲಿ ಬೆಳಗಿನ ಉಪಹಾರ ತಯಾರಿಸಲು ಮುಂದಾದಾಗ ಪ್ಲಾಸ್ಟಿಕ್ ಮೊಟ್ಟೆ ಕಂಡುಬಂದಿದೆ. ಮೊಟ್ಟೆಯ ಒಳಭಾಗದಲ್ಲಿ ಪ್ಲಾಸ್ಟಿಕ್ ನಂತಹ ವಸ್ತು ಕಂಡುಬಂದಿದ್ದು, ನೀರಿಗೆ ಹಾಕಿದಾಗ ಕೆಟ್ಟವಾಸನೆ ಬಂದಿದೆಯಂತೆ. ಈ ಸಂದರ್ಭದಲ್ಲಿ ಕುಟುಂಬದವರು ಎಚ್ಚೆತ್ತುಕೊಂಡಿದ್ದಾರೆ.