ಚೀನಾದಿಂದ ನಮ್ಮ ದೇಶಕ್ಕೆ ಅದೇನೆಲ್ಲಾ ಬರುತ್ತಿದೆಯೋ ಏನೋ ಗೊತ್ತಿಲ್ಲ. ಆದರೆ ಬಡಪಾಯಿ ಜನ ಮಾತ್ರ ಅದರ ಪರಿಣಾಮಗಳನ್ನ ಎದುರಿಸಬೇಕಾಗಿದೆ. ಮಾರುಕಟ್ಟೆಗೆ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಬಂದ ಸುದ್ದಿ ನಡುವೆಯೇ ಈಗ ಪ್ಲಾಸ್ಟಿಕ್ ಸಕ್ಕರೆ ಬಂದಿದೆ ಎಂಬುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಪ್ಲಾಸ್ಟಿಕ್ ಸಕ್ಕರೆ ಬೆಳಕಿಗೆ ಬಂದಿರುವುದು ಚಿತ್ರದುರ್ಗ ತಾಲೂಕಿನ ಕೋನಬೇವು ಎಂಬ ಹಳ್ಳಿಯಲ್ಲಿ. ಆ ಹಳ್ಳಿಯ ಶಿವರುದ್ರಪ್ಪ ಎಂಬುವರು ಸಕ್ಕರೆ ಖರೀದಿಸಿ ಮನೆಗೆ ತಂದು ಅದನ್ನ ಡಬ್ಬಕ್ಕೆ ತುಂವುವಾಗ ಫ್ಯಾನ್ ಗಾಳಿಗೆ ಸಕ್ಕರೆ ತೂರಿ ಹೋಗಿದೆ. ಅನುಮಾನಗೊಂಡ ಶಿವರುದ್ರಪ್ಪ ಅದನ್ನು ನೀರಿಗೆ ಹಾಕಿ ಪರೀಕ್ಷಿಸಿದಾಗ ಪ್ಲಾಸ್ಟಿಕ್ ಸಕ್ಕರೆ ತೇಲಿದೆ. ಕೂಡಲೆ ಅವರು ಆಹಾರ ಸಂರಕ್ಷಣಾ ಅಧಿಕಾರಿಯ ಜೊತೆ ಅಂಗಡಿಗೆ ಹೋಗಿ ಮಾಲೀಕರನ್ನು ತರಾಟೆ ತೆಗೆದುಕೊಂಡಿದ್ದಾರೆ.