ಬಿಜೆಪಿ ನಾಯಕರಿಗೆ ಹೇಳ್ತೀನಿ.ದಯವಿಟ್ಟು ನಿಮಗೆ ಕೊಲೆ ಮಾಹಿತಿ ಇದ್ರೆ ಗೃಹ ಇಲಾಖೆಗೆ ತಿಳಿಸಿ.ಮಾಧ್ಯಮದ ಮುಂದೆ ಹೇಳಿಕೆ ಬೇಡ.ತನಿಖಾ ತಂಡಕ್ಕೆ ಕೊಡಿ.ಸಿದ್ದು ಸವದಿ ಅವರು ISIS ಅಂತ ಹೇಳಿದ್ದಾರೆ.ಇದು ದಿಕ್ಕು ತಪ್ಪಿಸೋ ಕೆಲಸ.ನಾವು ಪಾರದರ್ಶಕ ತನಿಖೆ ಮಾಡ್ತಿದ್ದೇವೆ.ವಾಟ್ಸಾಪ್ ಸ್ಟೇಟಸ್ ಬದಲಾವಣೆ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ.ಬಿಜೆಪಿಯವರಿಗೆ ಯಾಕೆ ಆತುರ.ಏನೇ ಸಾಕ್ಷಿ ಇದ್ರೂ ಕೊಡಿ ಎಂದು ಬಿಜೆಪಿಯವರಿಗೆ ಪ್ರೀಯಾಂಕ ಖರ್ಗೆ ಹೇಳಿದ್ದಾರೆ
ಗೃಹ ಸಚಿವರು ಸ್ಥಳಕ್ಕೆ ಹೋಗದ ಬಗ್ಗೆ ಬಿಜೆಪಿ ಕಳವಳ ವಿಚಾರವಾಗಿ ಪ್ರಿಲಿಮನರಿ ಇನ್ವೆಸ್ಟಿಗೇಷನ್ ನಲ್ಲಿ ವೈಯಕ್ತಿಕ ವಿಚಾರ ಅಂತ ಬಂದಿದೆ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ.ಅಲ್ಲದೇ ಬಿಜೆಪಿ ಅವರಿಗೆ ಒಂದು ಕಿವಿಮಾತು.ರಾಜ್ಯಪಾಲರ ಭಾಷಣ ಆಗಿದೆ, ಬಜೆಟ್ ಆಗಿದೆ, ಜನರು ಸಮಸ್ಯೆ ಎದುರಿಸ್ತಿದ್ದಾರೆ.ನಿಮ್ಮ ವಿಪಕ್ಷ ನಾಯಕ ಎಲ್ಲಿ.ಕರ್ನಾಟಕ ಸದನಕ್ಕೆ ಒಂದು ಇತಿಹಾಸ ಇದೆ.ಅದಕ್ಕೆ ಕಳಂಕ ತಂದು ಕಪ್ಪು ಚುಕ್ಕೆ ಆಗಿದ್ದೀರ.ಎಲ್ಲಿ ನಿಮ್ಮ ವಿಪಕ್ಷ ನಾಯಕರೆಲ್ಲಿ ಸ್ವಾಮಿ.ಮೊದಲು ಅದರ ಕಡೆ ಗಮನ ಕೊಡಿ.ಇಲಾಖೆ ಸಮರ್ಥರ ಕೈಯಲ್ಲಿದೆ.ಏನೇ ಇದ್ರು ತನಿಖೆ ನಡೆಸ್ತಾರೆ ಎಂದು ಬಿಜೆಪಿ ವಿರುದ್ಧ ಪ್ರೀಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.