ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹನಿ ನೀರು ಸೇವಿಸದೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥ ದೇವರ ದರ್ಶನ ಮಾಡಿ ಹೊರಟಿದ್ದಾರೆ. ಆದರೆ ವಿಶೇಷ ಅಂದ್ರೆ ಮಂಗಳೂರಿನ ಎಳನೀರಿಗೆ ಮೋದಿ ಮನಸೋತಿದ್ದಾರೆ.
ಮಂಜುನಾಥ ದೇವರ ದರ್ಶನ ಮಾಡಿ ಅಲ್ಲಿ ಸಂಕಲ್ಪ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಡಿದ್ದು, ತೀರ್ಥ ಸೇವನೆಯಷ್ಟೆ. ಧ್ಯಾನ, ಪೂಜೆ ಮುಗಿಸಿದ ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಎಳನೀರಿನ ಜತೆ ಒಣ ಹಣ್ಣುಗಳನ್ನ ನೀಡಿದ್ದಾರೆ. ಆದರೆ ಉಪವಾಸ ಇರುವ ಕಾರಣ ಯಾವುದೂ ಬೇಡ ಎಂದಿದ್ದಾರೆ. ಆದರೆ ಎಳನೀರು ದೇವರ ಪ್ರಸಾದದಂತೆ ಸ್ವೀಕರಿಸಿ ಎಂದಾಗ ಪ್ರಧಾನಿ ಮೋದಿ ಸ್ಟ್ರಾ ಬಳಸದೆ ಎಳನೀರು ಸವಿದಿದ್ದಾರೆ. ಶಿವನ ಕ್ಷೇತ್ರದಲ್ಲಿ ಅಮೃತ ಕುಡಿದಂತಾಯ್ತು ಎಂದರು.