ಏಷ್ಯಾದಲ್ಲೇ ಅತಿ ಉದ್ದದ ಸುರಂಗ ಮಾರ್ಗ ಉದ್ಧಾಟಿಸಿದ ಪ್ರಧಾನಿ ಮೋದಿ

ಭಾನುವಾರ, 2 ಏಪ್ರಿಲ್ 2017 (17:13 IST)
ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ 9.2 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
 
ಸುರಂಗ ಮಾರ್ಗದಲ್ಲಿ 124 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭದ್ರತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
 
3700 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಸುರಂಗ ಮಾರ್ಗ 6 ಮೀಟರ್ ಅಗಲವಿದ್ದು 9.4 ಕಿ.ಮೀ ಉದ್ದವಿದೆ ಜಮ್ಮು ಕಾಶ್ಮಿರದ ಉದಂಪುರ್- ರಾಂಬನ್ ಹೆದ್ದಾರಿಯಲ್ಲಿರುವ ಸುರಂಗ ಮಾರ್ಗದಲ್ಲಿ ಪ್ರಧಾನಿ ಮೋದಿ ಸಂಚರಿಸಿ ಪ್ರಯಾಣದ ಸುಖ ಅನುಭವಿಸಿದರು. 
 
2011 ರಲ್ಲಿ ಯುಪಿಎ ಸರಕಾರ ಸುರಂಗ ಮಾರ್ಗದ ಯೋಜನೆ ರೂಪಿಸಿತ್ತು. ಜಮ್ಮು ಕಾಶ್ಮಿರದ ಶ್ರೀನಗರ್ ಬಳಿಯಿರುವ ಸುರಂಗ ಮಾರ್ಗದಿಂದಾಗಿ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ