ಪ್ರಧಾನಿ ಮೋದಿ ಇಂದಿನ ಗದಗ ಸಮಾವೇಶಕ್ಕೆ ಕಾದಿದೆ ಆಪತ್ತು!

ಶನಿವಾರ, 5 ಮೇ 2018 (07:44 IST)
ಗದಗ: ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಬಿಜೆಪಿ ಪರ ಪ್ರಚಾರ ಮಾಡಲು ಆಗಮಿಸುತ್ತಿದ್ದು, ಗದಗದಲ್ಲಿ ನಡೆಯಲಿರುವ ಸಮಾವೇಶಕ್ಕೆ ಪ್ರತಿಭಟನೆಯ ಕಾವು ತಾಕಿದೆ.

ಮಹದಾಯಿ ನದಿ ವಿವಾದ ಇತ್ಯರ್ಥ ವಿಚಾರದಲ್ಲಿ ಪ್ರಧಾನಿ ಮೋದಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಅವರ ಮೇಲೆ ಹೋರಾಟಗಾರರಿಗೆ ಮುನಿಸಿದೆ. ಪ್ರತಿಭಟನೆಗೆ ಸ್ಪಂದಿಸದ ಪ್ರಧಾನಿ ಈಗ ಯಾಕೆ ಬರುತ್ತಿದ್ದಾರೆ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.

ಹೀಗಾಗಿ ಇಂದು ಮಧ್ಯಾಹ್ನ ಗದಗದಲ್ಲಿ ನಡೆಯಲಿರುವ ಪ್ರಧಾನಿ ಮೋದಿಯವರ ಸಮಾವೇಶಕ್ಕೆ ಪ್ರತಿಭಟನೆಯ ಮುನ್ಸೂಚನೆ ಸಿಕ್ಕಿದೆ. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೌನ ವಹಿಸಿದ್ದಾರೆ ಎಂಬುದು ಹೋರಾಟಗಾರರ ಆಕ್ರೋಶಕ್ಕೆ ಕಾರಣ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ