ಚಿತ್ರದುರ್ಗಾ : ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣದ ತನಿಖೆ ಆರು ದಿನಗಳ ನಂತರ ಚುರುಕು ಪಡೆದಿದೆ. ಇದೀಗ ಮಠದಲ್ಲೇ ಶ್ರೀಗಳ ಬಂಧನವಾಗಿದೆ.
ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿರುವ ಹೊತ್ತಲ್ಲೇ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಒಬ್ಬರಾಗಿರುವ ಎ2 ಹಾಸ್ಟೆಲ್ ವಾರ್ಡನ್ ರಶ್ಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಾರ್ಡನ್ ರಶ್ಮಿ ಮೇಲೆ ಪೊಲೀಸರು ಕೈಗೊಳ್ಳುವ ಕ್ರಮದ ಮೇಲೆ ಶ್ರೀಗಳ ಮೇಲೆ ಯಾವ ರೀತಿಯ ಕ್ರಮ ಆಗಬಹುದು ಎಂಬುದು ನಿರ್ಧಾರವಾಗುವ ಸಂಭವ ಇತ್ತು. ಆ ಬಳಿಕ ರಶ್ಮಿಯವರನ್ನು ಪೊಲೀಸರು ಬಂಧಿಸಿದ್ದರು.
ಇದೀಗ ಸ್ವಾಮೀಜಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಶ್ರೀಗಳನ್ನು ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಮಠದಿಂದ ಹೊರಬರುತ್ತಿದ್ದಂತೆ ಶ್ರೀಗಳು ಕಾವಿ ಕಳಚಿ ಬಿಳಿ ವಸ್ತ್ರದಲ್ಲಿ ಹೊರಬಂದಿದ್ದಾರೆ.
ಶ್ರೀಗಳಿಗೆ ಈ ಹಿಂದೆ ಕೊರೊನಾ ಬಂದಿತ್ತು. ವೈದ್ಯಕೀಯ ಪರೀಕ್ಷೆಗೆ ಬಂದಿದ್ದೆ. ಬಿಪಿ ಸಮಸ್ಯೆ ಇತ್ತು ಪರೀಕ್ಷೆ ನಡೆಸಿ ಬಳಿಕ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆ ನಡೆಸಿದ ಡಾಕ್ಟರ್ ಪಾಲಕ್ಷಯ್ಯ ತಿಳಿಸಿದ್ದಾರೆ.