ಚಂದ್ರನ ಕಾಣದ ಭಾಗ ದಕ್ಷಿಣ ಭಾಗದಲ್ಲಿ ಉಪಗ್ರಹ ಇಳಿಸುವಲ್ಲಿ ಯಶಸ್ವಿಯಾದ ಇಸ್ರೋ ವಿಜ್ಞಾನಿಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ರು. ಬೆಳಗ್ಗೆ ಆರು ಗಂಟೆ ಸುಮಾರಿಗೆ ಹೆಚ್ಎಎಲ್ ಏರ್ಪೋರ್ಟ್ ಗೆ ಬಂದಿಳಿದ ಮೋದಿ ಇಸ್ರೋ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತೆರಳಿದ್ರು, ಕಾರ್ಯಕ್ರಮ ಮುಗಿಸಿ ದೆಹಲಿಗೆ ಪ್ರಯಾಣ ಬೆಳೆಸಿದ್ರು. ಚಂದ್ರನ ಡಾರ್ಕ್ ಪ್ಲೇಸ್ ಆದ ದಕ್ಷಿಣ ಭಾಗದಲ್ಲಿ ಪ್ರಜ್ಞಾನ್ ಉಪಗ್ರಹ ಸೇಫ್ ಲ್ಯಾಂಡ್ ಮಾಡುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಅದು ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡುವ ವಿಷ್ಯ. ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಸೇಪ್ ಲ್ಯಾಂಡ್ ಆಗುತ್ತಿದ್ದಂತೆ ವಿಜ್ಞಾನಿಗಳು ಸಂತಸದಿಂದ ಕುಣಿದಾಡಿದ್ರು. ಅಂದು ಮಾತನಾಡಿ ಇಸ್ರೋ ವಿಜ್ಞಾನಿಗಳ ಸಾಧನೆ ಬಗ್ಗೆ ಹಾಡಿ ಹೊಗಳಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ನೇರವಾಗಿ ಇಸ್ರೋ ಕಚೇರಿಗೆ ಭೇಟಿ ನೀಡಿ ಚಂದ್ರನ ಕಾಣದ ಭಾಗದ ಮೇಲೆ ಭಾರತದ ಹೆಜ್ಜೆ ಮುದ್ರಿಸುವಲ್ಲಿ ಶ್ರಮಿಸಿದ ಇಸ್ರೋ ಕಲಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗ್ಗೆ ಆರು ಗಂಟೆ ಸಮಯಕ್ಕೆ ಭಾರತೀಯ ಸೇನಾ ವಿಮಾನದಲ್ಲಿ ಹೆಚ್ ಎಎಲ್ ಏರ್ಪೋರ್ಟ್ ಗೆ ಬಂದಿಳಿದ ಪ್ರಧಾನಿ ಮೋದಿಯವ್ರು ಜಾಲಹಳ್ಳಿ ಸಮೀಪದ ಇಸ್ರೋ ಕಚೇರಿಗೆ ತೆರಳುವ ಮುನ್ನ ಏರ್ಪೋರ್ಟ್ ಕಚೇರಿ ಆವರಣದಲ್ಲಿಏರ್ಪಡಿಸಿದ್ದ ಪ್ರಚಾರ ಕಾರ್ಯಲ್ರಮದಲ್ಲಿ ಭಾಗಿಯಾಗಿ ಇಸ್ರೋ ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಈ ವೇಳೆ ಹೆಚ್ ಎಎಲ್ ಆವರಣದಲ್ಲಿ ನೂರಾರು ಜನ ಮೋದಿಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ರು.ಈ ವೇಳೆ ಯಾವುದೇ ಅಹಿತರಕ ಘಟನೆಗಳಿಗೆ ಅವಕಾಶ ನೀಡಬಾರದೆಂದು ಬೆಂಗಳೂರು ಸಿಟಿ ಪೊಲೀಸ್ರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ರು. ಹೆಚ್ ಎ ಎಲ್ ಟು ಪೀಣ್ಯಾ ರಸ್ತೆ ನಾಳೆ ಸಂಪೂರ್ಣ ಖಾಕಿಮಯವಾಗಿತ್ತು. ಸರಿ ಸುಮಾರು 25 ಕಿಲೋಮೀಟರ್ ವರೆಗೆ ರಸ್ತೆಯ ಎರಡು ಬದಿಯಲ್ಲಿ 10 ಮೀಟರ್ ಗೆ ಒಬ್ಬರಂತೆ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಅದರ ಜೊತೆಗೆ ಪ್ರಮುಖ ಜಂಕ್ಷನ್ ಗಳಲ್ಲಿ ಬಾಂಬ್ ಸ್ಕ್ವಾಡ್ ನಿಂದಲೂ ತಪಾಸಣೆ ಮಾಡಿದ್ದು, ಮಧ್ಯರಾತ್ರಿಯಿಂದಲೇ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಬ್ಬಂದಿ ರಸ್ತೆಯಲ್ಲಿ ಸಂಚರಿಸೋ ಅನುಮಾನಸ್ಪದರ ಮೇಲೆ ನಿಗಾವಹಿಸಿದ್ರು.ಇದರ ಜೊತೆಗೆ ಮೋದಿ ಹೆಚ್ ಎಎಲ್ ಏರ್ಪೋಟ್ ನಿಂದ ಹೊರಡುವ ಮುನ್ನ ಹಳೆ ಮದ್ರಾಸ್ ರಸ್ತೆ , ದೊಮ್ಮಲೂರು ,ಟ್ರಿನಿಟಿ ಸರ್ಕಲ್ , ಬಳ್ಳಾರಿ ರಸ್ತೆ , ಮೇಖ್ರಿ ಸರ್ಕಲ್ ಹಾಗೂ ಯಶ್ವಂತ್ಪುರ ಮಾರ್ಗದಲ್ಲಿಸಾಗುವ ವಾಹನಗಳನ್ನ ನಿಷೇಧಿಸಿ ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆಗಳನ್ನ ಸೂಚಿಸಿದ್ರು.