ಅಂಡರ್ ಪಾಸ್ ನಲ್ಲಿ ಸಿಲುಕಿದ ಲಾರಿ ಹೊರತೆಗೆಯಲು ಪೊಲೀಸರ ಹರಸಾಹಸ

ಬುಧವಾರ, 7 ಜೂನ್ 2023 (14:51 IST)
ಅಂಡರ್ ಪಾಸ್ ನಲ್ಲಿ ಲಾರಿ ಸಿಲುಕಿ ಹೊರತೆಗೆಯಲು ಪೊಲೀಸರು ಪರದಾಟ ನಡೆಸಿರುವ ಘಟನೆ ಮಹಾರಾಣಿ ಕಾಲೇಜ್ ಅಂಡರ್ ಪಾಸ್ ಬಳಿ  ನಡೆದಿದೆ.ಸದ್ಯ ಅಂಡರ್ ಪಾಸ್ ನ್ನ ಪೊಲೀಸರು ಬಂದ್ ಮಾಡಿದ್ದಾರೆ.ಮೈಸೂರು ಬ್ಯಾಂಕ್ ಕಡೆಯಿಂದ ಬಂದು ಲಾರಿ ಸಿಲುಕಿದೆ.ಲಾರಿ ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
 
ಅಂಡರ್ ಪಾಸ್ ಬಂದ್ ಮಾಡಿ ಟ್ರಾಫಿಕ್ ಡೈವರ್ಶನ್ ಸಂಚಾರಿ ಪೊಲೀಸರು ಮಾಡಿದ್ದಾರೆ.ಲಾರಿ ತೆಗೆಯಲು ಜೆಸಿಬಿಯನ್ನ ಉಪ್ಪಾರಪೇಟೆ  ಸಂಚಾರಿ ಪೊಲೀಸರು ತರಿಸಿದ್ದಾರೆ.ಅಂಡರ್ ಪಾಸ್ ಮೂಲಕ ಲಾರಿ ತೆರಳಲು ಸಾಧ್ಯವಿಲ್ಲ.ಆದ್ರೂ ಬಂದು ಲಾರಿ ಸಿಲುಕಿದೆ.ಲಾರಿ ಸಿಲುಕಿದ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸಿದ್ದಾರೆ.ಚಾಲುಕ್ಯ ಸರ್ಕಲ್ ಬದಲು ಫ್ರೀಡಂ ಪಾರ್ಕ್ ಕಡೆಯಿಂದ ಬರಲು ಸಂಚಾರಿ ಪೊಲೀಸರ ಸೂಚನೆ ನೀಡಿದ್ದಾರೆ.ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಚಾಲುಕ್ಯ ಸರ್ಕಲ್ ಸಂಪರ್ಕಿಸೋ ರಸ್ತೆಯ ಅಂಡರ್ ಪಾಸ್ ನ್ನ ಸದ್ಯಕ್ಕೆ ಬಂದ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ