32 ಬೈಕ್ ಕದ್ದವ ಕೊನೆಗೂ ಪೊಲೀಸರ ಬಲೆಗೆ ಬಿದ್ದ
ಈತ 25 ಲಕ್ಷ ಮೌಲ್ಯದ 32 ಬೈಕ್ ಗಳನ್ನು ಕದ್ದಿದ್ದಾನೆ ಎನ್ನಲಾಗಿದೆ. ತಮಿಳುನಾಡಿನ ಶರತ್ ಬಾಬು ಎಂಬಾತ ಬಂಧಿತ. ಈತನನ್ನು ಆನೆಕಲ್ ಉಪವಿಭಾಗದ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನಲ್ಲಿ ಪದೇ ಪದೇ ಬೈಕ್ ಕಳ್ಳತನ ಹೆಚ್ಚಾದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದೀಗ ಬೈಕ್ ಕದ್ದು ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.