ಇಂಥ ಪ್ರದೇಶಗಳಲ್ಲಿ ಪೊಲೀಸ್ ವ್ಯವಸ್ಥೆ ಭಾರೀ ಹೆಚ್ಚಳ: ಕಾರಣ?
ಕಂಟೈನ್ ಮೆಂಟ್ ಪ್ರದೇಶದಲ್ಲಿ ಪೊಲೀಸ್ ವ್ಯವಸ್ಥೆ ಇನ್ನೂ ಹೆಚ್ಚು ಬಿಗಿಗೊಳಿಸಲಾಗುವುದು. ಇದಕ್ಕೆ ಜನರು ಸಹಕಾರ ನೀಡಬೇಕೆಂದು ಡಿಸಿ ತಿಳಿಸಿದ್ದಾರೆ.
ಈ ಹನ್ನೆರಡೂ ಜನರು , ಮೆ 6 ಕ್ಕೆ ಸೋಂಕು ಪತ್ತೆಯಾದ ಯುವತಿ ರೋಗಿ ನಂ. 659 ಅವರ ಸಂಪರ್ಕದಿಂದ ಸೋಂಕಿತರಾಗಿರುತ್ತಾರೆ. ಈ ಪೈಕಿ 10 ಜನ ಯುವತಿಯ ಕುಟುಂಬದವರಾಗಿದ್ದಾರೆ. ಉಳಿದಂತೆ ಓರ್ವ ಸ್ನೇಹಿತೆ ಮತ್ತು ಇನ್ನೊಬ್ಬರು ಪಕ್ಕದ ಮನೆಯವರಾಗಿದ್ದಾರೆ.
ಸೋಂಕಿನ ಮೂಲ ಪತ್ತೆಯಾಗಿದ್ದರಿಂದ ಸಮುದಾಯಕ್ಕೆ ಹರಡಿಲ್ಲ ಎಂಬುದು ಖಚಿತವಾಗಿದೆ. ಕೋವಿಡ್ ಸೋಂಕು ಇವರೆಗೆ ಜಿಲ್ಲೆಯ ಕಂಟೈನ್ ಮೆಂಟ್ ಪ್ರದೇಶ ಭಟ್ಕಳ ಬಿಟ್ಟು ಬೇರೆಡೆ ವ್ಯಾಪಿಸಿಲ್ಲ ಎಂದಿದ್ದಾರೆ.