ಡ್ರಿಂಕ್ ಆಂಡ್ ಡ್ರೈವ್ ಮಾಡಿ ಕಿರಿಕ್ ಮಾಡಿದ ಪೊಲೀಸ್, ಪತ್ನಿ

ಭಾನುವಾರ, 4 ಸೆಪ್ಟಂಬರ್ 2022 (09:20 IST)
ಬೆಂಗಳೂರು: ಕಾನೂನು ಪಾಲಿಸಬೇಕಾದ ಪೊಲೀಸರೇ ಹಾದಿ ತಪ್ಪಿದರೆ ಏನು ಗತಿ? ಅಂತಹದ್ದೇ ಒಂದು ಘಟನೆ ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ಪೊಲೀಸ್ ಇನ್ಸ್ ಪೆಕ್ಟರ್ ಸಂಜೀವ್ ಮತ್ತು ಪತ್ನಿ ಉಷಾ ಡ್ರಿಂಕ್ ಆಂಡ್ ಡ್ರೈವ್ ಮಾಡಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದು ಬಳಿಕ ರಂಪಾಟ ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಉಷಾ ದೂರು ದಾಖಲಿಸಿದ್ದರು. ತಪಾಸಣೆ ವೇಳೆ ಸಂಜೀವ್ ಮತ್ತು ಪತ್ನಿ ಉಷಾ ಡ್ರಿಂಕ್ ಆಂಡ್ ಡ್ರೈವ್ ಮಾಡಿದ್ದು ಖಚಿತವಾಗಿತ್ತು. ದಂಪತಿ ವಿರುದ್ಧ ಸ್ಥಳೀಯರು ಪ್ರತಿದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ