ಸ್ಯಾಂಕಿ ಪ್ರತಿಭಟನಕಾರರಿಗೆ ಪೊಲೀಸರಿಂದ ನೋಟಿಸ್ ಜಾರಿ!

ಶನಿವಾರ, 1 ಏಪ್ರಿಲ್ 2023 (17:33 IST)
ಸಿಲಿಕಾನ್  ಸಿಟಿಯ ಮಲ್ಲೇಶ್ವರಂ ಪರಿಸರಕ್ಕೆ ಮನಸೋಲದವರೇ ಇಲ್ಲ … ಆದ್ರೆ ಬೋವಿ ಎಂಪಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಬೇಕೆಂದು ಸ್ಯಾಂಕಿ ರಸ್ತೆ ಮೇಲ್ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿತ್ತು , ಸಾರ್ವಜನಿಕರು ಅದಕ್ಕೆ ವಿರೋದ ವ್ಯಕ್ತಪಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ರು ಆದರೆ ಇದೀಗ ಪ್ರತಿಭಟನಾಕಾರರ ಮೇಲೆ ನಗರದ ಸದಾಶಿವನಗರ ಠಾಣೆಯಲ್ಲಿ ಎಫ್ ಐ ಆರ್ ಧಾಖಲಾಗಿದ್ದು ಇದಕ್ಕೆ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ
 
ಸ್ಯಾಂಕಿ ರಸ್ತೆ ಮೇಲ್ಸೇತುವೆ, ರಸ್ತೆ ವಿಸ್ತರಣೆ ಯೋಜನೆ ವಿರೋಧಿಸಿ ಫೆ.19ರಂದು ಸುಮಾರು 70 ಜನ ಸ್ಥಳೀಯ ನಿವಾಸಿಗಳು, ಮಕ್ಕಳು ಸೇರಿ ಸ್ಯಾಂಕಿ ಕೆರೆ ಪರಿಸರ ಉಳಿಸುವಂತೆ ಧರಣಿ ನಡೆಸಿದ್ದರು.ಅನುಮತಿ ಪಡೆಯದೇ ಧರಣಿ, ರಸ್ತೆ ಸಂಚಾರಕ್ಕೆ ಅಡಚಣೆ ಆರೋಪ ಹಿನ್ನೆಲೆ 9 ಜನರ ಮೇಲೆ ಎಫ್ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. 
 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಯೋಜನೆ ಸಂಬಂಧ ಭೂ ಸಾರಿಗೆ ಪ್ರಾಧಿಕಾರ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದರು. ಒಮ್ಮೆಲೇ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ Jhatkaa.org ನ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಗೆ ಬಿಬಿಎಂಪಿ ಬ್ರೇಕ್ ಹಾಕಿತ್ತು. ಒಪ್ಪಿಗೆ ನೀಡಿದ ನಂತರವೇ ಈ ಯೋಜನೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಆದರೂ ಇದಕ್ಕೆ ಒಪ್ಪದ Jhatkaa.org ನ ಕಾರ್ಯಕರ್ತರು, ಒಮ್ಮೆಲೆ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
 
ಪುಟ್ ಪಾತ್ ನಲ್ಲಿ ನಡೆದು ಪ್ರತಿಭಟನೆ ಮಾಡಿದ್ದೇವೆ. ಆದ್ರೆ ಪೊಲೀಸರು ಮಾತ್ರ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದೀರಿ, ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದೀರಿ. ಪೂರ್ವಾನುಮತಿ ಪಡೆಯದೇ ಹೋರಾಟ ಮಾಡಿದ್ದೀರಿ ಅಂತಾ ಕೇಸ್ ದಾಖಲಿಸಿಕೊಂಡಿದ್ದಾರೆ' ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಸ್ಯಾಂಕಿ ಯೋಜನೆ ಹಿಂಪಡೆಯುವಂತೆ ಒತ್ತಾಯಿಸಿ ಅಚ್ಚರಿಯ ಪ್ರತಿಭಟನೆ ಆರಂಭಿಸಿದ ಬೆಂಗಳೂರು ನಿವಾಸಿಗಳು ಪ್ರತಿಭಟನೆಯ ನೇತೃತ್ವವನ್ನು Jhatkaa.org ವಹಿಸಿತ್ತು. ಈ ಹಿನ್ನೆಲೆಯಲ್ಲಿ ಜಾಟ್ಕಾ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನೋಟಿಸ್ ಜಾರಿ ಮಾಡಿದ್ದಾರೆ. Jhatkaa.org ನ ಮ್ಯಾನೇಜಿಂಗ್ ಟ್ರಸ್ಟಿ ಅವಿಜಿತ್ ಮೈಕೆಲ್ ಅವರು ಮಾತನಾಡಿ, ಐಪಿಸಿ ಸೆಕ್ಷನ್ 341, 141 (ಕಾನೂನು ಬಾಹಿರ ಸಭೆ) ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ನೋಟಿಸ್ ಕಳುಹಿಸಿದ್ದಾರೆ. ನಾವು ಯಾವುದೇ ರೀತಿಯ ಕಾನೂನು ಬಾಹಿರ ಸಭೆಗಳನ್ನು ನಡೆಸಿಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆದಿತ್ತು. ಇಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ನಡೆದಿಲ್ಲ, ಹೀಗಾಗಿ ಎಫ್ಐಆರ್ ರದ್ದುಪಡಿಸವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದಿದ್ದಾರೆ ಸ್ಯಾಂಕಿ ಪ್ರತಿಭಟನಾಕಾರರು 
 
 ಬಿಬಿಎಂಪಿ ಮತ್ತು ಸಾರ್ವಜನಿಕರಿಗೆ ಜಟಾಪಟಿ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಸ್ಯಾಂಕಿಯನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಆದ್ರೆ ಬಿಬಿಎಂಪಿ ಮಾತ್ರ ತಮ್ಮ ಹಠವನ್ನು ನಿಲ್ಲಿಸುತ್ತಿಲ್ಲಾ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ