ಶೀಘ್ರದಲ್ಲಿ ಪೊಲೀಸ್ ವೇತನ ಹೆಚ್ಚಳ

ಸೋಮವಾರ, 31 ಅಕ್ಟೋಬರ್ 2016 (19:16 IST)
ಶೀಘ್ರದಲ್ಲಿಯೇ ಪೊಲೀಸರ ವೇತನದಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಗೃಹ ಸಚಿವ ಡಾಕ್ಟರ್ ಪರಮೇಶ್ವರ ನಾಯ್ಕ ಹೇಳಿದ್ದು ಪೊಲೀಸರು ಮತ್ತೆ ಪ್ರತಿಭಟನೆಯಲ್ಲಿ ತೊಡಗುವುದಿಲ್ಲವೆಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 
 
ಇಂದು ನಗರಕ್ಕೆ ಆಗಮಿಸಿದ್ದ ಪರಮೇಶ್ವರ್ ಪತ್ನಿ ಸಮೇತ ಹಾಸನಾಂಬೆ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸರ ವೇತನದಲ್ಲಿ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದರು.  
 
ಔರಾದ್ಕರ್ ಸಮಿತಿಯ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಈ ಬಾರಿ ಮುಖ್ಯಮಂತ್ರಿಗಳ ಜತೆ ಎರಡು ಬಾರಿ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ, 
 
ನವೆಂಬರ್ 14ಕ್ಕೆ ಪೊಲೀಸರು ಮತ್ತೆ ಪ್ರತಿಭಟನೆಗಿಳಿಯಲಿರುವ ವಿಚಾರದ ಬಗ್ಗೆ ಪ್ರಶ್ನಿಸಲಾಗಿ, ಮತ್ತೆ ಪ್ರತಿಭಟನೆಗಿಳಿಯುವುದಿಲ್ಲವೆಂಬ ನಂಬಿಕೆ ನನ್ನದು. ನನಗೂ ಪೊಲೀಸ್ ಸಿಬ್ಬಂದಿ ಮೇಲೆ ಅನುಕಂಪವಿದೆ ಎಂದರು. 
 
ಹಾಸನಾಂಬೆ ದರ್ಶನಕ್ಕೆ ಇದೇ ಪ್ರಥಮ ಬಾರಿ ಆಗಮಿಸಿರುವುದಾಗಿ ಹೇಳಿದ ಅವರು, ಹಾಸನಾಂಬೆ ದಯೆಯಿದ ಸಕಾಲಕ್ಕೆ ಮಳೆ ಸುರಿದು ಬರಗಾಲದಿಂದ ತತ್ತರಿಸಿರುವ ರೈತರ ಬವಣೆ ನಿಗಲಿ ಎಂದು ಆಶಿಸಿದರು.

ವೆಬ್ದುನಿಯಾವನ್ನು ಓದಿ