ಸ್ವಾತಂತ್ರ್ಯ ದಿನಾಚರಣೆಯಂದು ಕೇರಳ ಶಾಲೆಯಲ್ಲಿ ಆರ್‌ಎಸ್‌ಎಸ್ ಗೀತೆ, ವಿವರಣೆ ಕೇಳಿದ ಸಚಿವರು

Sampriya

ಬುಧವಾರ, 3 ಸೆಪ್ಟಂಬರ್ 2025 (18:37 IST)
Photo Credit X
ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಆರ್‌ಎಸ್‌ಎಸ್‌ ಗೀತೆಯನ್ನು ಹಾಡಿ ಇದೀಗ ವಿವಾದ ಸೃಷ್ಟಿಸಿದೆ. ಈ ಸಂಬಂಧ ಕೇರಳದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಶಾಲೆಯಿಂದ ವಿವರಣೆ ಕೇಳಿದ್ದಾರೆ.

ತಿರುೂರಿನ ಅಲತ್ತಿಯೂರಿನಲ್ಲಿರುವ ಕುಂಜಿಮೋನ್ ಹಾಜಿ ಮೆಮೋರಿಯಲ್ ಹೈಯರ್ ಸೆಕೆಂಡರಿ ಶಾಲೆ ಈ ಸಂಬಂಧ ವಿವಾದಕ್ಕೆ ಕಾರಣವಾಗಿದೆ. 

ಶಾಲಾ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ವೀಡಿಯೊವನ್ನು ಕೆಲವು ಆರ್‌ಎಸ್‌ಎಸ್ ಗುಂಪುಗಳು ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. 
ಶಾಲೆಯ ಎದುರು ವಿವಿಧ ರಾಜಕೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಕೆಲವು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಈ ಹಾಡನ್ನು ಕಲಿತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದು ಆರ್‌ಎಸ್‌ಎಸ್‌ನ ಹಾಡು ಎಂದು ತಿಳಿಯದೆ ಹಾಡಿದ್ದಾರೆ ಎಂದು ಶಾಲೆಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಶಿಕ್ಷಕರೂ ಅಜ್ಞಾನಿಗಳಾಗಿದ್ದಾರಾ ಎಂದು ಪ್ರಶ್ನೆ ಉದ್ಭವಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ