ವಿಧಾನಸೌಧ ಬಳಿ ಹತ್ತು ಲಕ್ಷ ಹಣ ಸೀಜ್ ಮಾಡಿದ ಪೊಲೀಸರು

ಗುರುವಾರ, 5 ಜನವರಿ 2023 (19:56 IST)
ವಿಕಾಸಸೌಧಕ್ಕೆ ಬರುತ್ತಿರುವಾಗ  ಬ್ಯಾಗ್ ತಪಾಸಣೆ ನಡೆಸುವಾಗ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದ್ದು ಈ ಸಂಬಂಧ ಲೋಕೊಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗದೀಶ್,ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಎಂಬಾತನನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಜೆ ವಿಕಾಸಸೌಧ ವೆಸ್ಟ್ ಗೇಟ್ ಇಲಾಖೆಯ ಜೂನಿಯರ್ ಇಂಜಿನಿಯರ್ ಎಂಬಾತನನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆಬಳಿ ಬಂದಿದ್ದ ಜಗದೀಶ್ ನನ್ನ ಭದ್ರತಾ ತಪಾಸಣೆ ನಡೆಸಿದಾಗ ಆತ ತಂದಿದ್ದ  ಬ್ಯಾಗ್ ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಈ ಬಗ್ಗೆ ಜಗದೀಶ್ ನನ್ನ ಪ್ರಶ್ನಿಸಿದ ಪೊಲೀಸರಿಗೆ ಸಮಂಜಸವಾದ ಉತ್ತರ ನೀಡಿಲ್ಲ.ಅಲ್ಲದೆ ಸೂಕ್ತ ದಾಖಲಾತಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಸಿಬ್ಬಂದಿ ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಣದ ಬ್ಯಾಗ್ ಜೊತೆ ಜಗದೀಶ್ ನನ್ನ ವಶಕ್ಕೆ ಪಡೆದುಕೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ತಂದಿದ್ದೇನೆ. ಕೆಲವು ಬಿಲ್ ಕ್ಲಿಯರ್ ಮಾಡಿಸಿಕೊಳ್ಳಲು ಹಣ ತೆಗೆದುಕೊಂಡು ಬಂದಿರುವುದಾಗಿ  ಜಗದೀಶ್ ಹೇಳಿಕ ನೀಡಿರುವುದಾಗಿ ತಿಳಿದುಬಂದಿದೆ. ಜಗದೀಶ್ ಹೇಳಿಕೆ ಪರಾಮರ್ಶೆ ನಡೆಸಿದ ಪೊಲೀಸರಿಗೆ ಪತ್ತೆಯಾಗಿರುವ ಹಣಕ್ಕೆ ಯಾವುದೇ ಬಿಲ್ ಇಲ್ಲದಿರವುದನ್ನು ಖಚಿತಪಡಿಸಿಕೊಂಡು ಹಣ ಜಪ್ತಿ ಮಾಡಿದ್ದಾರೆ. ಸದ್ಯ ಜಗದೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಪತ್ತೆಯಾಗಿರುವ 10 ಲಕ್ಷ ಹಣದ ಮೂಲದ ತನಿಖೆ ಚುರುಕುಗೊಳಿಸಿರುವುದಾಗಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ