ಮನೆಯಲ್ಲಿದ್ದ ಐಟಂ ಕದ್ದು ಪರಾರಿ ಆಗ್ತಿದ್ದ ಗಣೇಶ

ಗುರುವಾರ, 5 ಜನವರಿ 2023 (19:24 IST)
ಆತ ಖತರ್ನಾಕ್ ಕಳ್ಳ‌.ಆದ್ರೆ ಅತೀ ಹೆಚ್ಚು ಚಿನ್ನಾಭರಣ ಇರೊ ಹೈಫೈ ಬಂಗಲೆಗಳನ್ನ ಟಚ್ ಮಾಡ್ತಿರ್ಲಿಲ್ಲ.ಮಧ್ಯಮವರ್ಗ ಮತ್ತು ಬಡವರ ಮನೆಗಳನ್ನೇ ಟಾರ್ಗೆಟ್ ಮಾಡ್ತಿದ್ದ.ಮನೆ ಮುಂದೆ ಧೂಳು ಇತ್ತಂದ್ರೆ ಸಾಕು ಕೆಲಸ ಮುಗಿಸಿ ಎಸ್ಕೇಪ್ ಆಗ್ತಿದ್ದ.ಹೀಗೆ 25 ಕ್ಕೂ ಹೆಚ್ಚು ಮನೆಗಳಿಗೆ ಕನ್ನ ಹಾಕಿದವನು ಖಾಕಿ ಬಲೆಗೆ ಬಿದ್ದಿದ್ದಾನೆ.ಚಿನ್ನದ ಸರ,ಕಿವಿಯೋಲೆ,ಬಳೆಗಳನ್ನ ಜೋಡಿಸ್ತಿರೊ ಪೊಲೀಸರು.ಪಳ ಪಳ‌ಹೊಳೆಯೊ ಬೆಳ್ಳಿ ಸಾಮಾನುಗಳು ಇಲ್ಲಿವೆ.ಬೆಳ್ಳಿ ಲಕ್ಷ್ಮಿ ಮುಖವಾಡವನ್ನೂ ಇಡಲಾಗಿದೆ.ಮನೆಯಲ್ಲಿರಬೇಕಿದ್ದ ಟಿವಿ ಕೂಡ ಪೊಲೀಸ್ ಠಾಣೆ ಮುಂದಿದೆ.ಹಾಗೆ ಪಕ್ಕದಲ್ಲಿ ಕಾರೊಂದನ್ನು ನಿಲ್ಲಿಸಲಾಗಿದೆ.ಇದೆಲ್ಲದಕ್ಕೂ ಸೂತ್ರದಾರ ಈತನೇ ನೋಡಿ ಹೆಸರು ಗಣೇಶ ಅಲಿಯಾಸ್ ಟಚ್ ಗಣೇಶ.

ಬೋಳು ತಲೆ ಮಾಡ್ಕೊಂಡು.ಪಿಳ ಪಿಳ ಅಂತಾ ಕಣ್ಬಿಟ್ಕೊಂಡು.ಇಂಗು ತಿಂದ ಮಂಗನಂತೆ ಕಾಣ್ತಿರೊ ಈ ಆಸಾಮಿಯೇ ಟಚ್ ಗಣೇಶ.ಈತನ ಈ ವೇಶ ನೋಡಿ ಅಯ್ಯೋ ಪಾಪದವನು ಅನ್ಕೊಬೇಡಿ ಇವನ ಕಳ್ಳತನದ ಕಹಾನಿ ಕೇಳಿದ್ರೆ ನೀವೆ ಬೆಚ್ಚಿಬೀಳ್ತಿರಾ.ಹೌದು  ಈ ಟಚ್ ಗಣೇಶ ಇದುವರೆಗೆ 25 ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ರೆ ಈತನ ವಿವಿಧ ಪೊಲೀಸ್ ಠಾಣೆಯಲ್ಲಿ ಮೇಲೆ 18 ಪ್ರಕರಣಗಳಿವೆ.ಸದ್ಯ ಕೋಣನಕುಂಟೆ ಪೊಲೀಸರು ಈತನನ್ನ ಬಂಧಿಸಿದ್ದು 7 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಆಸಾಮಿಯ ಕಳ್ಳತನದ ಕಹಾನಿಯೇ ಡಿಫರೆಂಟ್.ಏರಿಯಾದಲ್ಲಿ ರೌಂಡ್ಸ್ ಹಾಕ್ತಿದ್ದ ಆಸಾಮಿ ಹೈಫೈ ಮನೆಗಳ ಸಹವಾಸಕ್ಕೆ ಹೋಗ್ತಾ ಇರ್ಲಿಲ್ಲ.ಯಾಕಂದ್ರೆ ಅಲ್ಲಿ ಭದ್ರತೆ ಹೆಚ್ಚು‌.ಅಲ್ಲದೇ ಸಿಸಿಟಿವಿ ಬೇರೆ ಇರುತ್ತೆ.ಯಾಕಪ್ಪಾ ತಲೆನೋವು ಅಂತಾ ಮದ್ಯಮವರ್ಗ ಹಾಗೂ ಬಡವರ್ಗದವರ ಮನೆಯನ್ನೇ ಟಾರ್ಗೆಟ್ ಮಾಡಿ ಸಿಕ್ಕಷ್ಟರಲ್ಲಿಯೇ ತೃಪ್ತಿ ಪಟ್ಕೊತಿದ್ದ.ಅಲ್ಲದೇ ಸಾಮಾನ್ಯ ಕಳ್ಳರಂತೆ ಮನೆಮುಂದೆ ಹಾಲಿನ ಪ್ಯಾಕೆಟ್ ಪೇಪರ್ ಬಿದ್ದದ್ದ ಮನೆಗಳನ್ನ‌ ಮಾತ್ರ ಕಳ್ಳತನಕ್ಕೆ ಆಯ್ಕೆ ಮಾಡ್ಕೊತಿರಲಿಲ್ಲ.ಯಾಕಂದ್ರೆ ಎಲ್ಲರೂ ಕೂಡ ಮನೆಗೆ ಹಾಲು,ಪೇಲರ್ ಹಾಕಿಸಿಕೊಳ್ಳಲ್ಲ.ಹಾಗಾಗಿ ಮನೆ ಮುಂದೆ ಹೆಚ್ಚಾಗಿ ಧೂಳು ಬಿದ್ದಿದ್ರೆ.ರಂಗೋಲಿ ಹಾಕದೇ ಇದ್ದಿದ್ದರೆ.ಹಾಕಿದ್ದ ರಂಗೋಲಿ ಹೆಚ್ಚಾಗಿ ಅಳಿಸಿದ್ದಿದ್ದರೆ ಅಂತಹ ಮನೆಗಳಿಗೂ ಕನ್ನ ಹಾಕ್ತಿದ್ದ.

ಮನೆಯೊಳಗೆ ನುಗ್ಗಿ ಮನೆಯಲ್ಲಿ ಸಿಕ್ಕ ಚಿನ್ನ,ಬೆಳ್ಳಿ ಸಾಮಾನು ಟಿವಿ ,ವಾಚ್ ಹೀಗೆ ಬೆಲೆ ಬಾಳೊ‌ವಸ್ತಗಳನ್ನ ಅಬೇಸ್ ಮಾಡ್ತಿದ್ದ.ಮನೆಯಲ್ಲಿ ಕಾರಿನ ಕೀ ಸಿಕ್ಕಿದ್ರೆ ಹೊರಗೆ ಬಂದು ಕಾರ್ ಇದೆಯಾ ಅಂತಾ ನೋಡ್ತಿದ್ದ.ಕಾರ್ ಇದ್ರೆ ಅದನ್ನ ಕದ್ದು ಪರಾರಿಯಾಗ್ತಿದ್ದ.ಅದೇ ಕಾರಲ್ಲಿ ಏರಿಯಾ ರೌಂಡ್ಸ್ ಹಾಕಿ ಕಳ್ಳತನಕ್ಕೆ ಹೊಂಚುಹಾಕ್ತಿದ್ದ.ಲಕ್ಷ್ಮಿ ಯ ಬೆಳ್ಳಿಯ ಮುಖವಾಡವನ್ನೂ ಬಿಡದೆ ಕದ್ದೊಯ್ತಿದ್ದ‌.ಸದ್ಯ ಆರೋಪಿ ಗಣೇಶ್ ರನ್ನ ಬಂಧಿಸಿರೊ ಕೋಣನಕುಂಟೆ ಠಾಣೆ ಪೊಲೀಸರು ಈತನಿಂದ.15 ಲಕ್ಣ ಮೌಲ್ಯದ 216 ಗ್ರಾಂ ಚಿನ್ನಾಭರಣ,3 ಕೆಜಿ ಬೆಳ್ಳಿ,4 ವಾಚ್,ಒಂದು ಟಿವಿ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.ಸದ್ಯ ಆರೋಪಿಯನ್ನ ವಶಕ್ಕೆ ಪಡೆದಿರೊ‌ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದು ಮತ್ತಷ್ಟು ಕಳ್ಳತನ ಪ್ರಕರಣ ಬೆಳಕಿಗೆ ಬರೊ ಸಾಧ್ಯತೆ ಇದೆ.ಏನೇ ಹೇಳಿ ನಾವು ಬಡವರು ನಮ್ಮ ಮನೆಯಿಂದ ಏನು ಕದಿತಾರೆ ಅಂತಾ ನಿರ್ಲಕ್ಷ್ಯ ವಹಿಸಬೇಡಿ.ಗಣೇಶ್ ನಂತಹ ಕ್ರಿಮಿಗಳು,ವಾಚ್, ಟಿವಿ ಸಿಕ್ಕಿದ್ರೂ ಬಿಡಲ್ಲಾ.ಯಾವುದಕ್ಕೂ ಜೋಪಾನವಾಗಿರಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ