ಹಣೆಯಲ್ಲಿ ಕುಂಕುಮವಿಟ್ಟುಕೊಂಡಿದ್ದಾರೆಂದು ಬಂಧನ: ಪೊಲೀಸರ ಮೇಲೆ ಆಕ್ರೋಶ

Krishnaveni K

ಶನಿವಾರ, 19 ಅಕ್ಟೋಬರ್ 2024 (11:04 IST)
ಗದಗ: ಹಣೆಯಲ್ಲಿ ಕುಂಕುಮವಿಟ್ಟುಕೊಂಡಿದ್ದಾರೆಂದು ಯುವಕನನ್ನು ವಶಕ್ಕೆ ಪಡೆದಿರುವ ಗದಗ ಪೊಲೀಸರ ವಿರುದ್ಧ ಈಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಘಟನೆ ನಡೆದಿದೆ.

ಗದಗ ಪೊಲೀಸರು ಹೆದ್ದಾರಿಯಲ್ಲಿ ತಪಾಸಣೆ ನಡೆಸುತ್ತಿದ್ದಾಗ ವಾಹನವೊಂದನ್ನು ತಡೆದಿದ್ದಾರೆ. ಈ ಪೈಕಿ ಒಬ್ಬ ಹಣೆ ತುಂಬಾ ಕುಂಕುಮ ಹಚ್ಚಿಕೊಂಡಿದ್ದ. ಈತನನ್ನು ನೋಡಿ ಈತ ಹಿಂದೂ ಸಂಘಟನೆಯ ಕಾರ್ಯಕರ್ತನಿರಬೇಕೆಂದು ಅನುಮಾನಿಸಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಈ ವ್ಯಕ್ತಿ ನಾನು ಒಬ್ಬ ರಿಕ್ಷಾ ಡ್ರೈವರ್ ಇದ್ದೇನೆ. ಬಸವನಿಗೆ ಕಾಯಿ ಒಡೆಸ್ಕೊಳ್ಳಕೆ ಬಂದಿದ್ದೀನಿ ಸರ್. ನಾನೂ ನನ್ನ ದೋಸ್ತ ಇಬ್ಬರೂ 20 ಕಾಯಿ ಒಡೆಸ್ಕೊಂಡು ನನ್ನ ಅಟೋ ಹತ್ಕೊಂಡು ಹೋಗ್ತೀನಿ ಅಷ್ಟೇ. ಆದರೆ ನನ್ನ ಹಣೆಲಿ ಕುಂಕುಮ ಇರೋದನ್ನು ನೋಡಿ ಕೂರಿಸ್ಕೊಂಡಿದ್ದಾರೆ.

ಪ್ರತೀ ಶನಿವಾರ ಇಲ್ಲಿ ಬಂದು ಕಾಯಿ ಒಡೆಸ್ಕೊಂಡು ಹೋಗ್ತೀವಿ. ಹಾಗೇ ಬಂದಿದ್ದೆವು ಅಷ್ಟೇ. ಕಾಯಿ ಒಡೆಸ್ಕೊಂಡು ಆಮೇಲೆ ನಮ್ಮ ಅಟೋ ಹತ್ಕೊಂಡು ಹೋಗ್ತೀವಿ. ನಾವು ಯಾವ ಸಂಘಟನೆಯವರೂ ಅಲ್ಲ ಎಂದು ಯುವಕ ಹೇಳಿರುವ ವಿಡಿಯೋ  ವೈರಲ್ ಆಗಿದೆ. ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ