ಉಂಡ ಮನೆಗೆ ದ್ರೋಹ ಬಗೆದ ಮನೆ ಕೆಲಸದಾಕೆ, ರೊಟ್ಟಿಗೆ ಮೂತ್ರ ಬೆರೆಸಿದ ಕಿರಾತಕಿ ಬಂಧನ

Sampriya

ಬುಧವಾರ, 16 ಅಕ್ಟೋಬರ್ 2024 (21:41 IST)
ಗಾಜಿಯಾಬಾದ್: ಮನೆಯ ಮಾಲೀಕನಿಗೆ ಕೆಲಸದಾಕೆಯೊಬ್ಬಳು ರೊಟ್ಟಿ ಮಾಡಲು ಮೂತ್ರ ಬೆರೆಸಿ, ಪೊಲೀಸ್ ಅತಿಥಿಯಾದ ಘಟನೆ  ಗಾಜಿಯಾಬಾದ್‌ನಲ್ಲಿ ನಡೆದಿದೆ.

ಕಳೆದ ಎಂಟು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತಳನ್ನು ಶಾಂತಿ ನಗರ ಕಾಲೋನಿಯ ರೀನಾ(32) ಎಂದು ಗುರುತಿಸಲಾಗಿದೆ. ಮನೆ ಮಾಲೀಕ ನಿತಿನ್ ಗೌತಮ್ ಅವರ ಪತ್ನಿ ರೂಪಮ್ ಅವರು ತಮ್ಮ ಕುಟುಂಬ ಸದಸ್ಯರು ಲಿವರ್ ಸಮಸ್ಯೆಯಿಂದ ಬಳಲುತ್ತಿರುವುದನ್ನು ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ತಮ್ಮ ಆರೋಗ್ಯದ ಹಿಂದೆ ತಮ್ಮ ಮನೆಯ ಕೆಲಸದಾಕೆ ಮಾಡುವ ಅಡುಗೆಯಲ್ಲಿ ಅನುಮಾನಗೊಂಡ ಮನೆ ಮಾಲೀಕ ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದ್ದರು. ನಿತಿನ್ ಗೌತಮ್ ಅವರು ತಮ್ಮ ಮೊಬೈಲ್ ಫೋನ್ ಬಳಸಿ ರಹಸ್ಯವಾಗಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ಕೆಲಸದಾಕೆ ಹಿಟ್ಟಿನಲ್ಲಿ ಮೂತ್ರ ಬೆರೆಸುವುದು ಸೆರೆಯಾಗಿದೆ.

ಕುಟುಂಬದವರು ನೀಡಿದ ದೂರು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿ, ಮಂಗಳವಾರ ರೀನಾಳನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಮಾಲೀಕರು ಆಗಾಗ್ಗೆ ಸಣ್ಣ ತಪ್ಪುಗಳಿಗೂ ನಿಂದಿಸುತ್ತಿದ್ದರಿಂದ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ