ಜಿಲ್ಲಾ ಪಂಚಾಯತ್ ನಲ್ಲಿ ಪೊಲೀಟಿಕಲ್ ಹೈಡ್ರಾಮ್

ಶುಕ್ರವಾರ, 15 ಫೆಬ್ರವರಿ 2019 (15:40 IST)
ಜಿಲ್ಲಾ ಪಂಚಾಯತ್ ನಲ್ಲಿ ಪೊಲೀಟಿಕಲ್ ಹೈಡ್ರಾಮ್ ನಡೆದಿದೆ.

ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ. ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಅವಿಶ್ವಾಸ ಮಂಡನೆಗೆ
ಜಿಲ್ಲಾ ಪಂಚಾಯತ್ ಸಿಇಓ ಮಹಾಂತೇಶ ಬೀಳಗಿ ಮುಂದೆ ನಿರ್ಣಯಕ್ಕೆ ಒತ್ತಾಯಿಸಲಾಗಿದೆ.

16 ಕಾಂಗ್ರೆಸ್, 6 ಬಿಜೆಪಿ, 1 ಜೆಡಿಎಸ್ ಸೇರಿ ಒಟ್ಟು 23 ಜಿಲ್ಲಾ ಪಂಚಾಯತ್  ಸದಸ್ಯರಿಂದ ಅವಿಶ್ವಾಸಕ್ಕೆ ಒತ್ತಾಯಿಸಲಾಯಿತು. ಒಟ್ಟು 34 ಸದಸ್ಯರ ಬಲ ಹೊಂದಿದೆ.

ಕಲಬುರಗಿ ಹೈಕೊರ್ಟ್ ಪೀಠದ ತಡೆ ನಡುವೆಯೂ ಜಿಲ್ಲಾ ಪಂಚಾಯತ್ ನಲ್ಲಿ ಅವಿಶ್ವಾಸ ಕೈಗೊಳ್ಳಲಾಗಿದೆ. ಸಭೆ ನಡೆಸಿದರೂ ಸಿಇಓ ಮಹಾಂತೇಶ ಫಲಿತಾಂಶ ಘೋಷಣೆ ಮಾಡಲಿಲ್ಲ. ಹೈಕೋರ್ಟ್ ಆದೇಶದಲ್ಲಿ ಸಭೆ ನಡೆಸಲು ಅವಕಾಶವಿದೆ. ಆದರೆ ಫಲಿತಾಂಶವನ್ನ ನೀಡಲು ಅವಕಾಶವಿಲ್ಲ. ಹೀಗಾಗಿ ಫಲಿತಾಂಶವನ್ನ ಕೋರ್ಟ್ ಗೆ ಕಳುಹಿಸಿಕೊಡುತ್ತೇವೆ ಎಂದು ಸಿಇಓ ತಿಳಿಸಿದರು.

ಸದಸ್ಯರ ಈ ನಿರ್ಣಯಕ್ಕೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅವಿಶ್ವಾಸ ಮಾಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರೇ ಕಾರಣ ಎಂದು ದೂರಿದ್ದಾರೆ.   


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ