ರಾಜಕೀಯ ಪ್ರೇರೇಪಿತ ಸಂಘಟನೆಗಳನ್ನು ಬ್ಯಾನ್ ಮಾಡಲು ವಿವಿ ಆದೇಶ

ಬುಧವಾರ, 2 ಫೆಬ್ರವರಿ 2022 (16:28 IST)
ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳಿಗೆ ಬೆಂಗಳೂರು ವಿಶ್ವ ವಿದ್ಯಾಲಯ ಬ್ರೇಕ್ ಹಾಕಿದ್ದು, ರಾಜಕೀಯ ಬೆಂಬ ಲಿತ ವಿದ್ಯಾರ್ಥಿ ಸಂಘಟನೆಗಳ ಫ್ಲೆಕ್ಸ್, ಬ್ಯಾನರ್​ಗಳು ಹಾಕದಂತೆ ವಿಶ್ವವಿದ್ಯಾಲಯ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.
ಕೊರೊನಾ ಕಾರಣಕ್ಕೆ ಯಾರಿಗೂ ಪ್ರತಿಭಟನೆಗೆ ಅವಕಾಶ ಇಲ್ಲ. ಬಳಿಕ ಏನೇ ಸಮಸ್ಯೆ ಇದ್ದರೂ, ಸಂಶೋಧನಾ ಮತ್ತು ಸ್ನಾತ ಕೋತ್ತರ ವಿದ್ಯಾರ್ಥಿಗಳ ಒಕ್ಕೂಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಹೊರತು ಪಡಿಸಿ ರಾಜಕೀಯ ಬೆಂಬಲಿತ ವಿದ್ಯಾ ರ್ಥಿ ಸಂಘಟನೆ ಗಳ ಫ್ಲೆಕ್ಸ್, ಬ್ಯಾನರ್ ಹಾಕದಂತೆ ನಿರ್ಬಂಧ ಹೇರಲಾಗಿದೆ. ರಾಜಕೀಯ ವಿದ್ಯಾರ್ಥಿ ಸಂಘಟನೆ ದೂರವಿಡಲು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ರಚನೆ ಮಾಡಲಾಗಿದ್ದು,
 
ಎಬಿವಿಪಿ, ಎನ್‌ಎಸ್ಯುಐ ಹಾಗೂ ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳಿಗೆ ವಿವಿ ಆವರಣದಲ್ಲಿ ನಿರ್ಬಂಧ ಹಾಕಲಾಗಿದೆ. ನಿನ್ನೆ ನಡೆದ ಹಾಗೂ ಪ್ರತಿಭಟನೆಯಲ್ಲಿ ಫ್ಲೇಕ್ಸ್, ಬ್ಯಾನರ್ ಪ್ರದರ್ಶನ ನಿಷೇಧಿಸಲಾಗಿತ್ತು. ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳು ಇನ್ನು ಮುಂ ದೆ ರಾಜಕೀಯ ಪಕ್ಷಕ್ಕೆ ಸೇರಿದರೆ ಅಂತ ಸಂಘಟನೆಗಳಿಗೆ ಪ್ರತಿಭಟನೆಗೆ ಅವಕಾಶ ಇಲ್ಲ. ವಿವಿ ವಿದ್ಯಾರ್ಥಿಗಳೇ ನೇರವಾಗಿ ಸಮಸ್ಯೆ ಗಳನ್ನು ಬಗೆಹರಿಸಲು ಸಹಕಾರವಾಗುವಂತೆ ವಿವಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ರಚನೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿವಿ ಸಂಶೋಧನಾ ವಿದ್ಯಾರ್ಥಿಗಳು ವಿವಿ ಕುಲಪತಿಗಳಿಗೆ ಪತ್ರ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ