ಕುಮಾರಸ್ವಾಮಿಯ ಡಿಎನ್ಎಯಲ್ಲಿಯೇ ಧ್ವೇಷದ ರಾಜಕೀಯವಿದೆ: ಡಿಕೆ ಶಿವಕುಮಾರ್‌

Sampriya

ಗುರುವಾರ, 20 ಮಾರ್ಚ್ 2025 (17:38 IST)
ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧದ ಭೂ ಒತ್ತುವರಿ ಪ್ರಕರಣದಲ್ಲಿ ಯಾವುದೇ ಸೇಡಿನ ರಾಜಕೀಯ ಇಲ್ಲ. ಸರ್ಕಾರಿ ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಪಾಲಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇದೆಲ್ಲ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪಿತೂರಿ ಎಂದ ಬೆನ್ನಲ್ಲೇ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕುಮಾರಸ್ವಾಮಿ ಅವರ ಡಿಎನ್ಎಯಲ್ಲಿಯೇ ಧ್ವೇಷದ ರಾಜಕೀಯವಿದೆ. ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಮಾತ್ರ ಪಾಲಿಸಿದ್ದಾರೆ. ಎಸ್‌ಆರ್ ಹಿರೇಮಠ ಅವರು ಪ್ರಕರಣ ದಾಖಲಿಸಿದ್ದಾರೆ. ಇದು ಹೇಗೆ ಸೇಡಿನ ರಾಜಕೀಯವಾಗುತ್ತದೆ? ನಾವು ಯಾವುದೇ ದೂರು ದಾಖಲಿಸಿಲ್ಲ. ಹಿರೇಮಠ ಅವರು ನನ್ನ ವಿರುದ್ಧವೂ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶದ ನಂತರ ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸೇಡಿನ ಉದ್ದೇಶವಿಲ್ಲ' ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರು ಈ ಹಿಂದೆ ಮೈಸೂರಿನಲ್ಲಿ ನನ್ನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಅವರು ನನ್ನ, ನನ್ನ ಹೆಂಡತಿ, ನನ್ನ ಸಹೋದರಿ ಮತ್ತು ನನ್ನ ಸಹೋದರನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರೊಂದಿಗೆ ಸಮ್ಮಿಶ್ರ ಸರ್ಕಾರ ಮಾಡಿಕೊಂಡಿದ್ದರಿಂದ ನಾವು ಮೌನವಾಗಿದ್ದೇವೆ. ಸದ್ಯ ಅವರು ಮೌನವಾಗಿದ್ದರೆ ಅವರಿಗೆ ಒಳ್ಳೆಯದು' ಎಂದು  ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ