ಮೈಸೂರು ಬಲೂನ್ ಮಾರುತ್ತಿದ್ದ ಬಾಲಕಿಗೆ ಪಾಪಿ ಹೇಗೆಲ್ಲಾ ಹಿಂಸೆ ಮಾಡಿದ್ದ: ಮರಣೋತ್ತರ ಪರೀಕ್ಷೆಯಲ್ಲಿ ಬಯಲು
ದಸರಾ ಸಂದರ್ಭದಲ್ಲಿ ಬಲೂನ್ ಮಾರಿ ಜೀವನ ನಿರ್ವಹಣೆಗೆಂದು ಕುಟುಂಬದ ಜೊತೆ ಬಂದಿದ್ದ ಬಾಲಕಿಯನ್ನು ರಾತ್ರಿ ಮಲಗಿದ್ದಾಗ ಅಪಹರಿಸಿದ್ದ ಆರೋಪಿ ಕಾರ್ತಿಕ್ ಕುಡಿದ ಮತ್ತಿನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ.
ಕೃತ್ಯದ ಬಳಿಕ ಬಾಲಕಿ ಮೇಲೆ ಸುಮಾರು 18-19 ಬಾರಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಬಾಲಕಿ ಮೃತದೇಹದಲ್ಲಿ ಹಲವು ಕಡೆ ಚಾಕುವಿನಿಂದ ಇರಿದ ಗಾಯಗಳು ಕಂಡುಬಂದಿವೆ. ಕೊನೆಯ ಕ್ಷಣದಲ್ಲಿ ಬಾಲಕಿ ಎಷ್ಟು ನೋವು ಅನುಭವಿಸಿರಬಹುದು ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ. ಕೊಲೆ ಮಾಡಿದ ಬಳಿಕ ಬಾಲಕಿಯ ಟೆಂಟ್ ಬಳಿಯೇ ಮೃತದೇಹ ಬಿಸಾಕಿ ಆರೋಪಿ ಪರಾರಿಯಾಗಿದ್ದ. ಇದೀಗ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.