ಕಲುಷಿತ ನೀರಿನಿಂದ ಕರೆಂಟ್! ಸಚಿವ ಡಿಕೆಶಿಗೆ ಐಡಿಯಾ ಕೊಟ್ಟವರಾರು?

ಗುರುವಾರ, 30 ಮಾರ್ಚ್ 2017 (12:25 IST)
ಬೆಂಗಳೂರು: ಬೆಳಂದೂರು ಕೆರೆಯಲ್ಲಿ ಕಲುಷಿತ ನೀರಿನಿಂದಾಗಿ ಬಿಳಿ ನೊರೆ ತೇಲಿಬರುತ್ತಿರುವ ವಿಚಾರದಲ್ಲಿ ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಈ ಕಲುಷಿತ ನೀರಿನ ಸದುಪಯೋಗ ಪಡೆಯಬಹುದಂತೆ.

 

ಹೌದು. ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಇಂತಹದ್ದೊಂದು ಐಡಿಯಾ ಬಂದಿದೆ. ಈ ಐಡಿಯಾ ಕೊಟ್ಟವರು ಅವರ ಸ್ನೇಹಿತರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಬೆಳಂದೂರು ಕೆರೆಯ ಸ್ಥಿತಿಯ ಬಗ್ಗೆ ಭಾರೀ ಸುದ್ದಿಯಾಗಿತ್ತು.

 
ಈ ಸುದ್ದಿಯನ್ನು ಓದಿದ ಅವರ ಸ್ನೇಹಿತರು ಕರೆ ಮಾಡಿ ಕಲುಷಿತ ನೀರಿನಿಂದ ಕರೆಂಟ್ ಉತ್ಪಾದಿಸಬಹುದು ಎಂದು ಐಡಿಯಾ ಕೊಟ್ಟರಂತೆ. ಅದರಂತೆ ಸಚಿವರು ಜರ್ಮನ್ ತಾಂತ್ರಿಕತೆಯನ್ನು ನೋಡಿದ್ದಾರಂತೆ. ಇದೀಗ ಜರ್ಮನ್ ತಂತ್ರಜ್ಞಾನ ಬಳಸಿ ಈ ಕಲುಷಿತ ಕೆರೆಯ ಸದುಪಯೋಗ ಪಡೆಯಲು ಇಂಧನ ಸಚಿವರು ಯೋಜನೆ ರೂಪಿಸುತ್ತಿದ್ದಾರಂತೆ!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ