ಫ್ರೀ ಬಸ್ ಬೆನ್ನಲ್ಲೇ BMTCಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.. BMTCಗೆ ಪ್ರತಿ ನಿತ್ಯ 3.16 ಲಕ್ಷ ಹಾಗೂ ಮಾಸಿಕ 94.80 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತೆ.. ಅದರಂತೆ BPCLನಿಂದ BMTC ಡೀಸೆಲ್ ಖರೀದಿ ಮಾಡ್ತಿದ್ರು. ಆದ್ರೆ ಈಗಾಗ್ಲೇ, ನಷ್ಟದಲ್ಲಿರೋ ಬಿಎಂಟಿಸಿ BPCLಗೆ ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡಿದೆ.. ಫ್ರೀ ಬಸ್ ಸ್ಕೀಂನಿಂದ BMTCಗೆ ಆದಾಯದ ಪ್ರಮಾಣ ಏಕಾಏಕಿ ಇಳಿಕೆಯಾಗಲಿದೆ.. ಸರ್ಕಾರವೇನೋ ವೆಚ್ಚ ಭರಿಸುವ ಭರವಸೆ ನೀಡಿದೆ. ಆದ್ರೆ ಸಮಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡದಿದ್ರೆ ಬಸ್‌ಗಳ ನಿರ್ವಹಣೆ ಮಾಡೋದು ಕಷ್ಟಕರವಾಗಿದೆ.. ಹೀಗಾಗಿ, ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಹಣ ಬಿಡುಗಡೆ ಮಾಡುವಂತೆ ಬಿಎಂಟಿಸಿ ನಿರ್ವಹಣ ಮಂಡಳಿ ಪಟ್ಟು ಹಿಡಿದಿದೆ